ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಯುವರಾಜ್ ಕುಮಾರ್ ಅಪ್ಪು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ: ನಟಿ ರಮ್ಯಾ
ಈಗಾಗ್ಲೆ ಗಂಧದ ಗುಡಿ ಪ್ರೀರಿಲೀಸ್ ಈವೇಂಟ್ ನ ಅದ್ದೂರಿ ಆಮಂತ್ರಣ ಪತ್ರಿಕೆ ತಯಾರಾಗಿದೆ. ಈ ಆಹ್ವಾನ ಪತ್ರಿಕೆಯನ್ನು ಸಂಪೂರ್ಣ ಮರದಿಂದ ತಯಾರಿಸಲಾಗಿದ್ದು, ಪತ್ರಿಕೆ ಜೊತೆಗೆ ಪುನೀತ್ ರಾಜ್ಕುಮಾರ್ ಪುತ್ಥಳಿಯನ್ನು ಇರಿಸಲಾಗಿದೆ. ಅಲ್ಲದೆ ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್ಕುಮಾರ್ಎಂದು ಬರೆದಿರುವ ಹಸ್ತಾಕ್ಷರ ಮುದ್ರಣ ಮಾಡಲಾಗಿದೆ. ಈಗಾಗಲೇ ಗಂಧದ ಗುಡಿ ಪ್ರೀರಿಲೀಸ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಅನೇಕರ ಕೈ ಸೇರಿದ್ದು ಇದೀಗ ನಟಿ ರಮ್ಯಾ ಅವರ ಕೈ ಸೇರಿದೆ.
ನಟ ಯುವರಾಜ್ ಕುಮಾರ್ ಆಹ್ವಾನ ಪತ್ರಿಕೆಯನ್ನು ರಮ್ಯಾ ಅವರಿಗೆ ನೀಡಿದ್ದಾರೆ. ಅಹ್ವಾನ ಪತ್ರಿಕೆಯ ಜೊತೆಗೆ ಯುವರಾಜ್ ಕುಮಾರ್ ಜೊತೆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟಿ ರಮ್ಯಾ, ಮೈ ಸ್ವೀಟ್ ಯುವ ರಾಜ್ಕುಮಾರ್ ಈಗ ಚಿಕ್ಕವನಲ್ಲ. ಅಪ್ಪು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.
