• January 2, 2026

ಒಂದೇ ದಿನ ಒಂದು ಕೋಟಿಗೆ ಅಧಿಕ ವೀಕ್ಷಣೆ ಪಡೆದ ಗಂಧದ ಗುಡಿ ಟ್ರೈಲರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಗಂಧದ ಗುಡಿ ಟ್ರೈಲರ್ ಬಿಡುಗಡೆ ಆಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಡುಗಡೆ ಆದ ಒಂದೇ ದಿನಕ್ಕೆ ಕೋಟಿ ವೀಕ್ಷಣೆ ಪಡೆದುಕೊಂಡಿದ್ದು ಪ್ರತಿಯೊಬ್ಬರು ಗಂಧದ ಗುಡಿ ಸಾಕ್ಷ್ಯಾ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಗಂಧದ ಗುಡಿ ಟ್ರೈಲರ್ ನೋಡಿ ಸ್ಯಾಂಡಲ್ ವುಡ್ ಜೊತೆಗೆ ಪರಭಾಷೆಯ ಮಂದಿಯೂ ಮೆಚ್ಚುಗೆ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಸಾಕಷ್ಟು ರಾಜಕೀಯ ನಾಯಕರು ಹ್ಯಾಟ್ಸ್ ಆಫ್ ಅಂತಿದ್ದಾರೆ. ಟ್ರೈಲರ್ ಬಿಡುಗಡೆ ಆದ ಒಂದೇ ಒಂದು ದಿನಕ್ಕೆ ಒಂದು ಕೋಟಿಗೆ ಅಧಿಕ ವೀಕ್ಷಣೆ ಪಡೆದಿದೆ. ಗಂಧದ ಗುಡಿ ಟ್ರೈಲರ್ ನಲ್ಲಿ ಪ್ರಕೃತಿ ಸೌಂದರ್ಯವನ್ನು ಎತ್ತಿ ಹಿಡಿಯಲಾಗಿದೆ. ಬೆಟ್ಟ,ಗುಡ್ಡ, ಹಳ್, ಕೊಳ್ಳ, ನದಿ, ಝರಿ ಪ್ರತಿಯೊಂದನ್ನು ಅತ್ಯದ್ಭುತವಾಗಿ ಸೆರೆಹಿಡಿಯಲಾಗಿದ್ದು ಅಭಿಮಾನಿಗಳು ಟ್ರೈಲರ್ ನೋಡಿ ವಾವ್ ಅಂತಿದ್ದಾರೆ. ಜೊತೆಗೆ ಟ್ರೈಲರ್ ನಲ್ಲಿ ಡಾ.ರಾಜ್ ಕುಮಾರ್ ಹುಟ್ಟಿ ಬೆಳೆದ ಮನೆಯನ್ನು ತೋರಿಸಲಾಗಿದೆ. ಇದೇ ಅಕ್ಟೋಬರ್ 28ರಂದು ಗಂಧದ ಗುಡಿ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದೆ. ಅದಕ್ಕಾಗಿ ಅಭಿಮಾನಿಗಳು ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಗಂಧದ ಗುಡಿ ಟ್ರೈಲರ್ ಅನ್ನು ಅಭಿಮಾನಿಗಳಿಗಾಗಿ ಬೆಂಗಳೂರಿನ ನರ್ತಕಿ ಥಿಯೇಟರ್ ನಲ್ಲಿ ಬಿಡುಗಡೆ ಮಾಡಿದ್ದು ನೋಡಿದ ಕಣ್ಣಂಚುಗಳಲ್ಲಿ ಕಂಬನಿ ಜಿನುಗಿತ್ತು. ಅಲ್ಲದೆ ಪುನೀತ್ ಪತ್ನಿಅಶ್ವಿನಿ ಪುನೀತ್ ರಾಜ್ ಕುಮಾರ್ ನಿಮ್ಮ ಅಪ್ಪು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now