• June 13, 2026

ಬೆಂಗಳೂರಿನಲ್ಲಿ 67ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ: ಪುನೀತ್ ರಾಜ್ ಕುಮಾರ್ ಗೆ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಅದ್ದೂರಿಯಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 67ನೇ ಸಾಲಿನ ಫಿಲ್ಮ್​ಫೇರ್​ ಸಮಾರಂಭ ಮಾದಾವರ ಬಳಿಯ ಬಿಐಇಸಿ ಮೈದಾನದಲ್ಲಿ ನಡೆಯಿತು. ಝಗಮಗಿಸುವ ವೇದಿಕೆ ಮೇಲೆ ಅನೇಕ ಮನರಂಜನಾ ಕಾರ್ಯಕ್ರಮಗಳು ನಡಿದ್ದು, ನಟಿಯಾರಾದ ಪೂಜಾ ಹೆಗ್ಡೆ, ಮೃಣಾಲ್​ ಠಾಕೂರ್​, ಕೃತಿ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಡ್ಯಾನ್ಸ್​ ಮಾಡಿದರು. ಈ ವೇಳೆ ಕನ್ನಡದಲ್ಲಿ ನಟ ಡಾಲಿ ಧನಂಜಯ್ ಗೆ ಬಡವ ರಾಸ್ಕಲ್ ಚಿತ್ರದ ನಟನೆಯ  ಅತ್ಯುತ್ತಮ ನಟ, ಆಕ್ಟ್ 1978 ಚಿತ್ರಕ್ಕಾಗಿ ಯಜ್ಞಾ ಶೆಟ್ಟಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರಾಜ್ ಬಿ ಶೆಟ್ಟಿ ಅವರಿಗೆ ಗರುಡ ಗಮನ ವೃಷಭ ವಾಹನ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಯಿತು. ಕನ್ನಡದಲ್ಲಿ ಫಿಲ್ಮ್​ಫೇರ್ ಪ್ರಶಸ್ತಿ ಪಡೆದವರ ಪಟ್ಟಿ: ಅತ್ಯುತ್ತಮ ನಟ: ಧನಂಜಯ್​ (ಬಡವ ರಾಸ್ಕಲ್​) ಅತ್ಯುತ್ತಮ ನಟಿ: ಯಜ್ಞಾ ಶೆಟ್ಟಿ (ಆಕ್ಟ್​ 1978) ಅತ್ಯುತ್ತಮ ನಿರ್ದೇಶನ: ರಾಜ್​ ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ) ಅತ್ಯುತ್ತಮ ಪೋಷಕ ನಟ: ಬಿ. ಸುರೇಶ (ಆಕ್ಟ್​ 1978) ಅತ್ಯುತ್ತಮ ಸಿನಿಮಾ: ಆಕ್ಟ್​ 1978 (ನಿರ್ದೇಶನ ಮಂಸೋರೆ) ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ರತ್ನನ್​ ಪ್ರಪಂಚ) ಅತ್ಯುತ್ತಮ ಸಂಗೀತ ನಿರ್ದೇಶನ: ವಾಸುಕಿ ವೈಭವ್​ (ಬಡವ ರಾಸ್ಕಲ್​) ಅತ್ಯುತ್ತಮ ಸಾಹಿತ್ಯ: ಜಯಂತ ಕಾಯ್ಕಿಣಿ (ಆಕ್ಟ್​ 1978) ಅತ್ಯುತ್ತಮ ಗಾಯಕ: ರಘು ದೀಕ್ಷಿತ್​ (ನಿನ್ನ ಸನಿಹಕೆ) ಅತ್ಯುತ್ತಮ ಗಾಯಕಿ: ಅನುರಾಧಾ ಭಟ್​ (ಬಿಚ್ಚುಗತ್ತಿ) ಅತ್ಯುತ್ತಮ ಛಾಯಾಗ್ರಹಣ: ಶ್ರೀಶಾ ಕುದುವಳ್ಳಿ (ಬಡವ ರಾಸ್ಕಲ್​) ಅತ್ಯುತ್ತಮ ನೃತ್ಯ ನಿರ್ದೇಶನ: ಜಾನಿ ಮಾಸ್ಟರ್​ (ಫೀಲ್​ ದ ಪವರ್​- ಯುವರತ್ನ) ಜೀವಮಾನ ಸಾಧನೆ ಪ್ರಶಸ್ತಿ: ಪುನೀತ್​ ರಾಜ್​ಕುಮಾರ್​ ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಮಿಲನಾ ನಾಗರಾಜ್​, ಅಮೃತಾ ಅಯ್ಯಂಗಾರ್​ ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಡಾರ್ಲಿಂಗ್​ ಕೃಷ್ಣ (ಲವ್​ ಮಾಕ್ಟೇಲ್​) ಕಳೆದ ಹಲವು ದಶಕಗಳಿಂದ ಫಿಲ್ಮ್ ಫೇರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದೇ ಮೊದಲ ಭಾರಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now