ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪತಿ ಅಮ್ಜದ್ ಮನೆಯಲ್ಲಿ ರಂಪಾಟ ಮಾಡಿದ ದಿವ್ಯಾ ಶ್ರೀಧರ್: ವಿಡಿಯೋ ವೈರಲ್ ಮಾಡಿದ ಪತಿ
ದಿವ್ಯಾ ಶ್ರೀಧರ್ ಹಾಗೂ ನಟ ಅಮ್ಜದ್ ಖಾನ್ ಪ್ರಕರಣದಲ್ಲಿ ಕರ್ನಾಟಕ ಮಹಿಳಾ ಆಯೋಗದ ಅಧಿಕಾರಿಗಳು ಪ್ರವೇಶ ಮಾಡಿದ್ದಾರೆ. ದಿವ್ಯಾ ಶ್ರೀಧರ್ ಕರ್ನಾಟಕ ಮೂಲದ ನಟಿಯಾಗಿರುವುದರಿಂದ ಮಹಿಳಾ ಆಯೋಗ ನಟಿಯ ಪರ ತಮಿಳು ನಾಡು ಸರ್ಕಾರಕ್ಕೆ ಮನವಿ ಮಾಡಿದೆ. ಪತಿಯಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಒತ್ತಾಯಿಸಿದ್ದರು.
ಡಿಸ್ಜಾರ್ಜ್ ಆದ ಬಳಿಕ ನೇರವಾಗಿ ಪತಿಯ ಮನೆಗೆ ಹೋದ ದಿವ್ಯಾ ಶ್ರೀಧರ್ ಯಾಕೆ ನನಗೆ ಮೋಸ ಮಾಡಿದೆ ಎಂದು ಅಮ್ಜದ್ ಖಾನ್ ವಿರುದ್ಧಿ ತಿರುಗಿ ಬಿದ್ದಿದ್ದಾರೆ. ಈ ವೇಳೆ ನೀನೆ ನನಗೆ ಮೋಸ ಮಾಡಿದೆ. ನೀನೆ ನನ್ನನ್ನು ಪ್ರೀತಿಸಿ ಮದುವೆಯಾದ ಎಂದು ಆರೋಪಿಸಿದ್ದಾರೆ.
ಪತಿ, ಪತ್ನಿ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2017ರಿಂದಲೂ ಲೀವಿಂಗ್ ಟುಗೇದರ್ ನಲ್ಲಿರುವ ದಿವ್ಯಾ ಶ್ರೀಧರ್ ಮುಸ್ಲಿಂ ಧರ್ಮಕ್ಕೆ ಮಂತಾತರ ಆಗಿ ಬಳಿಕ ಅಮ್ಜದ್ ಖಾನ್ ರನ್ನು ವಿವಾಹವಾಗಿದ್ದರು.
ಸದ್ಯ ದಿವ್ಯಾ ಮೂರು ತಿಂಗಳ ಮಗುವಾಗಿದ್ದು ಮದುವೆಯಾದ ಮೂರು ನಾಲ್ಕು ತಿಂಗಳೊಳಗೆ ಪತಿ, ಪತ್ನಿ ಮಧ್ಯೆ ಮನಸ್ತಾಪ ಉಂಟಾಗಿದೆ.
