• January 1, 2026

ಹೊಂಬಾಳೆ ಫಿಲಂನ ಧೂಮಂ ಸಿನಿಮಾದ ಮುಹೂರ್ತ

ಕನ್ನಡದ ಜೊತೆಗೆ ಪರಭಾಷೆಯ ಸಿನಿಮಾಗಳಿಗೂ ಬಂಡವಾಳ ಹೂಡುತ್ತಿರುವ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂ ಬ್ಯಾನರ್ ಅಡಿಯಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸೆಟ್ಟೇರಿದೆ. ಪವನ್ ಕುಮಾರ್ ನಿರ್ದೇಶನದ ಫಹಾದ್ ಫಾಸಿಲ್ ನಟನೆಯ ಧೂಮಂ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಇತ್ತೀಚೆಗಷ್ಟೇ ಫಹಾದ್ ಫಾಸಿಲ್ ಹಾಗೂ ಪವನ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿರುವುದಾಗಿ ಹೊಂಬಾಳೆ ಸಂಸ್ಥೆ ಟ್ವೀಟರ್ ಖಾತೆ ಮೂಲಕ ತಿಳಿಸಿತ್ತು. ಇದೀಗ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಚಿತ್ರದ ಮೊದಲ ದೃಶ್ಯಕ್ಕೆ ವಿಜಯ್ ಕಿರಗಂದೂರ್ ಸಹೋದರ ಮಂಜುನಾಥ್ ಕಿರಗಂದೂರು ಕ್ಲಾಪ್ ಮಾಡಿದ್ದು, ಶೈಲಜಾ ವಿಜಯ್ ಕಿರಗಂದೂರು ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ದಾರೆ. ಇಡೀ ಚಿತ್ರತಂಡದ ಜೊತೆಗೆ ”KGF’ ಸಿನಿಮಾ ನಿರ್ದೇಶಕ ಪ್ರಶಾಮತ್ ನೀಲ್ ಕೂಡ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು. ಕೆಜಿಎಫ್ ಸಿನಿಮಾದ ಮೂಲಕ ದೇಶ, ವಿದೇಶದಲ್ಲೂ ಸದ್ದು ಮಾಡುತ್ತಿರುವ ವಿಜಯ್ ಕಿರಗಂದೂರು ನಿರ್ಮಾಣದ ಹೊಂಬಾಳೆ ಫಿಲ್ಸ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದೆ. ಪರಭಾಷೆಯ ಬಿಗ್ ಬಜೆಟ್ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿರುವ ಹೊಂಬಾಳೆ ಬ್ಯಾನರ್ ಮೂಲಕ ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಬಂಡವಾಳ ಹೂಡುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now