ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸುಧಾ ಕೊಂಗರ ಸಿನಿಮಾಗೆ ಮತ್ತೊಬ್ಬ ಸ್ಟಾರ್ ನಟನ ಹೆಸರು
ಇತ್ತೀಚೆಗೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ರೆಡಿಯಾದ ಕಾಂತಾರ ಸಿನಿಮಾವನ್ನು ನೋಡಿ ತಮಿಳು ನಟ ಸಿಂಬು ಮೆಚ್ಚಿಕೊಂಡಿದ್ದರು. ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಿ ಹೊಂಬಾಳೆ ಸಂಸ್ಥೆಗೆ ಶುಭ ಹಾರೈಸಿದ್ದರು. ಹಾಗಾಗಿ ಹೊಂಬಾಳೆ ಹಾಗೂ ಸುಧಾ ಕೊಂಗರ ಚಿತ್ರಕ್ಕೆ ಹೀರೊ ಆಗಿ ಸಿಂಬು ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.
ವಿಭಿನ್ನ ಸಿನಿಮಾಗಳ ಮೂಲಕ ಕಾಲಿವುಡ್ ನಲ್ಲಿ ಸಿಂಬು ಹೆಸರು ಮಾಡಿದ್ದಾರೆ. ಈ ವರ್ಷ ಸಿಂಬು ನಟನೆಯ ಮಹಾ ಹಾಗೂ ವೇಂದು ತನಿದಾತ್ತು ಕಾಡು ಸಿನಿಮಾಗಳು ತೆರೆಕಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಕನ್ನಡದ ‘ಮಫ್ತಿ’ ಸಿನಿಮಾ ತಮಿಳು ರೀಮೆಕ್‌ನಲ್ಲೂ ಸಿಂಬು ನಟಿಸ್ತಿದ್ದು, ಇದೀಗ ಸುಧಾ ಕೊಂಗರ ನಿರ್ದೇಶನದ, ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾಗೆ ಸಿಂಬು ನಾಯಕ ಎಂಬ ಗುಸುಗುಸು ಶುರುವಾಗಿದೆ.
