• January 2, 2026

ಅವಳಿ ಮಕ್ಕಳ ಪೋಷಕರಾದ ನಟಿ ನಯನತಾರ, ವಿಘ್ನೇಶ್ ಶಿವನ್

ಮದುವೆಯಾದ ನಾಲ್ಕೇ ನಾಲ್ಕು ತಿಂಗಳಿಗೆ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗು ನಿರ್ದೇಶಕ ವಿಘ್ನೇಶ್ ಶಿವನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ವಿಘ್ನೇಶ್ ಶಿವನ್ ಹಾಗೂ ನಯನತಾರಾ ದಂಪತಿ ಪಾಲಕರಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ವಿಘ್ನೇಶ್ ಶಿವನ್ ನಯನತಾರ ನನ್ನ ಮಕ್ಕಳ ತಾಯಿಯಾಗಲಿದ್ದಾರೆ ಎಂದು ಬರೆದುಕೊಂಡಿದ್ದರು. ಆ ಬಳಿಕ ಜೂನ್ 9ರಂದು ಮಹಾಬಲೀಪುರಂನ ರೆಸಾರ್ಟ್ ಒಂದಲ್ಲಿ ಈ ಜೋಡಿ ಸಾಕಷ್ಟು ಅದ್ದೂರಿಯಾಗಿ ಹಸೆ ಮಣೆ ಏರಿದ್ದರು. ಅಲ್ಲದೆ ಕಳೆದ ಕೆಲ ದಿನಗಳಿಂದ ನಯನತಾರ ಗರ್ಭೀಣಿ ಎಂಬ ಗುಸು ಗುಸು ಶುರುವಾಗಿತ್ತು. ಆದರೆ ಇದೀಗ ಬಾಡಿಗೆ ತಾಯಿಯ ಮೂಲಕ ನಯನತಾರ ಹಾಗೂ ವಿಘ್ನೇಶ್ ಶಿವನ್ ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ವಿಘ್ನೇಶ್ ಶಿವನ್ “ನಯನ್ ಹಾಗೂ ನಾನು ಅಪ್ಪ, ಅಮ್ಮ ಆಗಿದ್ದೀವಿ. ನಮಗೆ ಅವಳಿ ಗಂಡು ಮಕ್ಕಳು ಹುಟ್ಟಿದ್ದಾರೆ. ನಮ್ಮ ಪ್ರಾರ್ಥನೆ ಹಾಗೂ ಹಿರಿಯರ ಆರ್ಶಿರ್ವಾದದಿಂದ ಎಲ್ಲ ಶುಭವಾಗಿದೆ. ಇಬ್ಬರು ಮಕ್ಕಳು ಹುಟ್ಟಿದ್ದಾರೆ ನಿಮ್ಮೆಲ್ಲರ ಆಶಿರ್ವಾದ ಬೇಕು” ಎಂದು ಬರೆದು ಅವಳಿ ಮಕ್ಕಳ ಕಾಲುಗಳಿಗೆ ಮುತ್ತಿಡುತ್ತಿರುವ ಫೋಟೊಗಳನ್ನು ವಿಘ್ನೇಶ್ ಶಿವನ್ ಹಂಚಿಕೊಂಡಿದ್ದಾರೆ. ಮಾರ್ಚ್‌ ತಿಂಗಳಲ್ಲೇ ಈ ಜೋಡಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಿದೆ ಎಂಬ ತಮಿಳು ಸಿನಿಮಾ ರಂಗದಲ್ಲಿ ಜೋರಾಗಿಯೇ ಕೇಳಿ ಬಂದಿತ್ತು. ಅದೀಗ ನಿಜವಾಗಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿ ಬಾಡಿಗೆ ತಾಯಿಯ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now