• March 16, 2026

ಆಸ್ಪತ್ರೆಯಿಂದ ನೇರವಾಗಿ ಪತಿಯ ಮನೆಗೆ ಹೋದ ದಿವ್ಯಾ ಶ್ರೀಧರ್: ಅಮ್ಜದ್ ಖಾನ್ ವಿರುದ್ಧ ತಿರುಗಿ ಬಿದ್ದ ನಟಿ

ಆಕಾಶ ದೀಪ ಧಾರವಾಹಿ ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜದ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಕರ್ನಾಟಕ ಮಹಿಳಾ ಆಯೋಗ ಬೆನ್ನಿಗೆ ನಿಂತ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿವ್ಯಾ ಡೈರೆಕ್ಟ್ ಆಗಿ ಪತಿ ಅಮ್ಜಾದ್ ಖಾನ್ ಮನೆಗೆ ಹೋಗಿರುವ ಪತಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ನನಗೆ ಯಾಕೆ ಮೋಸ ಮಾಡಿದೆ? ಸುಳ್ಳು ಯಾಕೆ ಹೇಳಿದೆ? ಎಂದು ಅಮ್ಜದ್ ಖಾನ್ ವಿರುದ್ಧ ತಿರುಗಿ ಬಿದಿದ್ದಾರೆ. ಈ ವೇಳೆ ಮೋಸ ಮಾಡಿದ್ದು ನಾನಲ್ಲ ನೀನು? ನೀನೆ ನನ್ನನ್ನು ಪ್ರೀತಿಸಿ ಮದುವೆ ಆದೆ ಎಂದು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿನ್ನೆಯಷ್ಟೇ ದಿವ್ಯಾ ಶ್ರೀಧರ್ ಪ್ರಕರಣಕ್ಕೆ ಕರ್ನಾಟಕ ಮಹಿಳಾ ಆಯೋಗ ಪ್ರವೇಶ ಮಾಡಿದೆ. ಕರ್ನಾಟಕದ ನಟಿ ದಿವ್ಯಾ ಶ್ರೀಧರ್ ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆಗ್ರಹಿಸಿದ್ದು, ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿ ಮೂಲಕವೂ ಮಾತನಾಡಿದ್ದಾರೆ. ಅಮ್ಜದ್ ಹಾಗೂ ದಿವ್ಯಾ ಶ್ರೀದರ್ ಆಕಾಶ ದೀಪ ಧಾರವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಮೂಡಿ ಬಳಿಕ ಲಿವಿಂಗ್ ಟುಗೇದರ್ ನಲ್ಲಿದ್ದರು. ಕಳೆದ ಜೂನ್ ತಿಂಗಳಲ್ಲಿ ಹಸೆ ಮಣೆ ಏರಿದ್ದ ಜೋಡಿಗಳ ಮಧ್ಯೆ ಮನಸ್ತಾಪ ಮೂಡಿದ್ದು ಇಬ್ಬರು ಆರೋಪ, ಪ್ರತ್ಯಾರೋಪ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now