• January 1, 2026

ಪೋಲ್ಯಾಂಡ್, ಥೈಲ್ಯಾಂಡ್ ಬಳಿಕ ದುಬೈ ಫ್ಲೈಟ್ ಹತ್ತಿದ ದರ್ಶನ್: ಕುತೂಹಲ ಮೂಡಿಸಿದ ಚಾಲೆಂಜಿಂಗ್ ಸ್ಟಾರ್ ಗಲ್ಫ್ ಭೇಟಿ

ಕ್ರಾಂತಿ ಸಿನಿಮಾದಲ್ಲಿ ತೊಡಗಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭರ್ಜರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಕ್ರಾಂತಿ ಸಿನಿಮಾದ ಶೂಟಿಂಗ್ ಗಾಗಿ ಪೋಲ್ಯಾಂಡ್ ಗೆ ಹೋಗಿ ಬಂದಿದ್ದ ದಚ್ಚು ಬಳಿ ಸ್ನೇಹಿತರ ಜೊತೆ ಥೈಲ್ಯಾಂಡ್ ಟ್ರಿಪ್ ಎಂಜಾಯ್ ಮಾಡಿ ಬಂದಿದ್ದರು. ಇದೀಗ ಮತ್ತೆ ದುಬೈ ಫ್ಲೈಟ್ ಹತ್ತಿದ್ದಾರೆ. ದರ್ಶನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಗಳ ಜೊತೆ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ದರ್ಶನ್ ದುಬೈ ಏರ್ ಪೋರ್ಟ್ ನಲ್ಲಿರುವ ವಿಡಿಯೋವೊಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ದರ್ಶನ್ ಅಭಿಮಾನಿಗಳು ಕ್ಷೇಮವಾಗಿ ಹೋಗಿ ಬನ್ನಿ ಎಂದು ಹಾರೈಸಿದ್ದಾರೆ. ದರ್ಶನ್ ದುಬೈಗೆ ಹೋಗಿರೋದು ಯಾಕೆ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಮೂಲಗಳ ಪ್ರಕಾರ ಕ್ರಾಂತಿ ಸಿನಿಮಾ ಹಾಡಿನ ಚಿತ್ರೀಕರಣವೊಂದು ಭಾಕಿ ಇದ್ದು ಇದೇ ಕಾರಣಕ್ಕೆ ದುಬೈಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ದರ್ಶನ್ ಜೊತೆ ಅವರ ಆಪ್ತ ಸಚ್ಚಿದಾನಂದ್ ಕೂಡ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ದರ್ಶನ್ ನಟನೆಯ 57ನೇ ಚಿತ್ರವನ್ನು ದರ್ಶನ್ ಆಪ್ತ ಸಚ್ಚಿದಾನಂದ್ ಅವರೇ ನಿರ್ಮಾಣ ಮಾಡ್ತಿದ್ದಾರೆ. ಈ ಸಿನಿಮಾದ ಬಗ್ಗೆ ಮಾತುಕತೆ ನಡೆಸಲು ದರ್ಶನ್ ಜೊತೆ ಸಚ್ಚಿದಾನಂದ್ ದುಬೈಗೆ ಹೋಗಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ದರ್ಶನ್ ಆಗಲಿ ಸಚ್ಚಿದಾನಂದ್ ಆಗಲಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸದ್ಯ ದರ್ಶನ್ ಕ್ರಾಂತಿ ಹಾಗೂ D56 ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ವಿ.ಹರಿಕೃಷ್ಣ ನಿರ್ದೇಶನದ ಕ್ರಾಂತಿ ಸಿನಿಮಾದ ಶೂಟಿಂಗ್ ಆಲ್ ಮೋಸ್ಟ್ ಕಂಪ್ಲೀಟ್ ಆಗಿದೆ. ಹೀಗಾಗಿ ನವೆಂಬರ್ ಕೊನೆಯ ವಾರದಲ್ಲಿ ಚಿತ್ರ ರಿಲೀಸ್ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ. ಇದರ ಜೊತೆಗೆ ತರುಣ್ ಸುಧೀರ್ ನಿರ್ದೇಶನದ D56 ಸಿನಿಮಾದ ಮೊದಲ ಶೆಡ್ಯೂಲ್ ಕಂಪ್ಲೀಟ್ ಆಗಿದೆ. ಈಗಾಗ್ಲೆ ರಾಧನಾ ನಟನೆಯ ಕೆಲವು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದು ದರ್ಶನ್ ರನ್ನು ಡಿಫರೆಂಟ್ ಲುಕ್ ನಲ್ಲಿ ತೋರಿಸುವ ಪ್ರಯತ್ನ ನಡೆಯುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now