ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಹೊಂಬಾಳೆ ಬ್ಯಾನರ್ ಜೊತೆ ಸುದೀಪ್ ಹೊಸ ಸಿನಿಮಾ: ಕುತೂಹಲ ಮೂಡಿಸಿದ ಫೋಟೋ
ಕೆಜಿಎಫ್ ಸಿನಿಮಾದ ಬಳಿಕ ಹೊಂಬಾಳೆ ಬ್ಯಾನರ್ ದೇಶ ವಿದೇಶದಲ್ಲೂ ಸದ್ದು ಮಾಡುತ್ತಿದೆ. ಇದರ ಜೊತೆಗೆ ಪರಭಾಷೆಯ ಸಿನಿಮಾಗಳಿಗೂ ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಬ್ಯಾನರ್ ಬಂಡವಾಳ ಹೂಡುತ್ತಿದೆ.
ಇತ್ತೀಚೆಗಷ್ಟೇ ಖ್ಯಾತ ನಟ ಫಹದ್ ಫಸಿಲ್ ಜೊತೆ ಸಿನಿಮಾ ಮಾಡುವುದಾಗಿ ಹೊಂಬಾಳೆ ಬ್ಯಾನರ್ ಘೋಷಿಸಿತ್ತು. ಚಿತ್ರಕ್ಕೆ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಸಿನಿಮಾಗೆ ಹೊಂಬಾಳೆ ಬ್ಯಾನರ್ ಬಂಡವಾಳ ಹೂಡತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹೊಂಬಾಳೆ ಫಿಲ್ಮ್ಸ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹಂಚಿಕೊಂಡಿರುವ ಒಂದು ಫೋಟೋ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸುದೀಪ್ ಅವರ ಜೊತೆಗೆ ಇರುವ ಫೋಟೋ ಹಂಚಿಕೊಂಡಿರುವ ಕಾರ್ತಿಕ್, ಹೊಸ ಆರಂಭ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
To new beginnings @KicchaSudeep Sir pic.twitter.com/IthUOilm9q
— Karthik Gowda (@Karthik1423) October 5, 2022
