• March 14, 2026

ಕಮಲಿ ಧಾರವಾಹಿ ಖ್ಯಾತಿಯ ಸುಹಾಸ್, ಗೇಬ್ರಿಯೆಲ್ಲಾ ಅದ್ದೂರಿ ಆರತಕ್ಷತೆ

ಕಮಲಿ ಧಾರವಾಹಿ ಖ್ಯಾತಿಯ ಶಂಬು ಅಲಿಯಾಸ್ ಸುಹಾಸ್ ಹಾಗೂ ಅನಿಕಾ ಅಲಿಯಾಸ್ ಗೇಬ್ರಿಯೆಲ್ಲಾ ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಸದ್ಯ ಈ ಜೋಡಿಗಳು ಅದ್ದೂರಿಯಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಅವುಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಮಲಿ ಧಾರವಾಹಿಯ ಸಂದರ್ಭದಲ್ಲಿ ಪರಿಚಯವಾದ ಸುಹಾಸ್ ಹಾಗೂ ಗೇಬ್ರಿಯೆಲ್ಲಾ ಬಳಿಕ ಸ್ನೇಹಿತರಾಗಿದ್ದಾರೆ. ಸ್ನೇಹ ಪ್ರೀತಿಗೆ ತಿರುಗಿದ್ದು ಬಳಿಕ ಇಬ್ಬರು ಪೋಷಕರು ಒಪ್ಪಿಗೆ ಪಡೆದು ಹಸೆಮಣೆ ಏರುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೀತಿಸಿದ್ದು ಸುಹಾಸ್ ಹಾಗೂ ಗೇಬ್ರಿಯೆಲ್ಲಾ ಇದೀಗ ಹೊಸ ಜೀವನ ಆರಂಭಿಸುತ್ತಿದ್ದಾರೆ. ಕುಟುಂಬ ಸದಸ್ಯರ ಒಪ್ಪಿಗೆ ಪಡೆದ ಜೋಡಿಗಳು ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಇದೀಗ ಸ್ನೇಹಿತರು, ಸಂಬಂಧಿಕರಿಗಾಗಿ ಜೋಡಿಗಳು ಆರತಕ್ಷತೆ ಆಯೋಜಿಸಿದೆ. ಆರತಕ್ಷತೆಯಲ್ಲಿ ಕಮಲಿ ಧಾರವಾಹಿ ತಂಡದ ಜೊತೆಗೆ ಇತರ ಧಾರವಾಹಿಯ ನಟ, ನಟಿಯರು ಭಾಗಿಯಾಗಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now