ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪರಭಾಷೆಯಲ್ಲೂ ರಿಷಬ್ ಶೆಟ್ಟಿ ಹವಾ: ಕಾಂತಾರ ಹಿಂದಿ ಟ್ರೈಲರ್ ರಿಲೀಸ್ ಗೆ ಕೌಂಟ್ ಡೌನ್
ಕರಾವಳಿ ಭಾಗದ ದೈವ ಕೋಲದ ಕುರಿತಾದ ಕಾಂತಾರ ಸಿನಿಮಾವನ್ನು ಕರಾವಳಿ ಭಾಗದ ಜನತೆಯ ಜೊತೆಗೆ ದೇಶ, ವಿದೇಶಿಗರು ಮೆಚ್ಚಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್ 30ರಂದು ತೆರೆಗೆ ಬಂದ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈಗಾಗ್ಲೆ ಪರಭಾಷೆಗೂ ಡಬ್ಬಿಂಗ್ ರೈಟ್ಸ್ ಕುರಿತಾಗಿ ಮಾತುಕತೆ ನಡೆಸಲಾಗುತ್ತಿದೆ. ಪರಭಾಷೆಯ ಡಬ್ಬಿಂಗ್ ಬಗ್ಗೆ ಈಗಾಗ್ಲೆ ಮಾತುಕತೆ ನಡೆಸುತ್ತಿದೆ.
`ಕಾಂತಾರಾ’ ಚಿತ್ರದ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ 9ರಂದು ಬೆಳಿಗ್ಗೆ 9.10ಕ್ಕೆ ರಿಲೀಸ್ ಆಗಲಿದೆ ಎಂದು ತಮ್ಮ ಅಧಿಕೃತ ಖಾತೆಗೆ ಮೂಲಕ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿದೆ. ಹಳ್ಳಿ ಸೊಗಡಿನಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಬಿಡುಗಡೆ ಆಗಿ ಒಂದು ವಾರ ಕಳೆದಿಲ್ಲ. ಅದಾಗ್ಲೆ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತೆ ಗಲ್ಲ ಪೆಟ್ಟಿಗೆ ಭರ್ತಿ ಮಾಡುತ್ತಿದೆ. ಸ್ಯಾಂಡಲ್ ವುಡ್ ಸಿನಿ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾಂತಾರಕ್ಕೆ ಪರಭಾಷೆಯ ಸ್ಟಾರ್ ನಟರು ಮೆಚ್ಚುಗೆ ಸೂಚಿಸಿದ್ದಾರೆ.
