• March 14, 2026

ಗಂಡ, ಹೆಂಡತಿ ಮನಸ್ತಾಪ: ಖ್ಯಾತ ಕಿರುತೆರೆ ನಟ ಆತ್ಮಹತ್ಯೆಗೆ ಶರಣು

ಹೆಂಡತಿಯ ಜೊತೆ ಮನಸ್ತಾಪ ಉಂಟಾದ ಕಾರಣಕ್ಕೆ ಮನನೊಂದ ಖ್ಯಾತ ತಮಿಳು ಕಿರುತೆರೆ ನಟ ಲೋಕೇಶ್ ರಾಜೇಂದ್ರನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಖ್ಯಾತ ಧಾರವಾಹಿ ಮರ್ಮದೇಶಂ ಮೂಲಕ ಬಾಲ ಕಲಾವಿದನಾಗಿ ಸಾಕಷ್ಟು ಖ್ಯಾತಿ ಘಳಿಸಿದ ಲೋಕೇಶ್ ರಾಜೇಂದ್ರನ್ ಆತ್ಮಹತ್ಯೆಯಿಂದ ತಮಿಳು ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದ್ದು ನಟನ ಸಾವಿಗೆ ಚಿತ್ರರಂಗ ಕಂಬನಿ ಮಿಡಿದಿದೆ. ಕಳೆದ ಒಂದು ತಿಂಗಳ ಹಿಂದೆ ಲೋಕೇಶ್ ಹಾಗೂ ಪತ್ನಿ ನಡುವೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಗಂಡನಿಂದ ದೂರವಾಗಿದ್ದ ಪತ್ನಿ ಕಳೆದ ನಾಲ್ಕು ದಿನಗಳ ಹಿಂದೆ ಡಿವೋರ್ಸ್ ನೋಟಿಸ್ ನೀಡಿದ್ದರು, ಇದರಿಂದ ಸಾಕಷ್ಟು ನೊಂದಿದ್ದ ಲೋಕೇಶ್ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾನು ಲೋಕೇಶ್ ಅವರನ್ನು ನಾಲ್ಕು ದಿನಗಳ ಹಿಂದೆ ನೋಡಿದ್ದೆ. ಸಾಕಷ್ಟು ನೊಂದಿದ್ದ. ಹಾಗೂ ಎಡಿಟಿಂಗ್ ಕೆಲಸ ಶುರುಮಾಡುವುದಾಗಿ ಹೇಳಿ ನನ್ನಿಂದ ಸ್ವಲ್ಪ ಹಣ ಕೇಳಿದ್ದ,. ನಾನು ಕೊಟ್ಟಿದೆ ಆದರೆ ಇದೀಗ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಲೋಕೇಶ್ ತಂದೆ ಕಣ್ಣೀರಿಟ್ಟಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದ ಲೋಕೇಶ್ 15ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. 34 ವರ್ಷ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಲೋಕೇಶ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now