ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬನಾರಸ್ ವಿತರಣಾ ಹಕ್ಕು ಖರೀದಿಸಿದ ಕೇರಳದ ಪ್ರಖ್ಯಾತ ವಿತರಣಾ ಸಂಸ್ಥೆ
ಈ ಬಗ್ಗೆ ಸ್ವತಃ ಸಂಸ್ಥೆಯೇ ಅಧಿಕೃತ ಮಾಹಿತಿ ನೀಡಿದೆ. ದೇಶಾದ್ಯಂತ ಉದ್ಯಮಿಯಾಗಿ ದೊಡ್ಡ ಹೆಸರು ಮಾಡಿರುವ ಥಾಮಸ್ ಆಂಟೋನಿ, ತೋಮಿಚನ್ ಮುಪಕುಪ್ಪದಮ್ ಎಂದೇ ಹೆಸರುವಾಸಿಯಾಗಿದ್ದಾರೆ.
ಮಲಕುಪ್ಪಡಮ್ ಫಿಲಂಸ್ ಮೂಲಕ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದು ಜೊತೆಗೆ ಸಾಕಷ್ಟು ಸಿನಿಮಾಗಳ ವಿತರಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಎಲ್ಲ ರೀತಿಯಲ್ಲಿಯೂ ಗುಣಮಟ್ಟ ಹೊಂದಿರುವ ಚಿತ್ರಗಳ ವಿತರಣಾ ಹಕ್ಕುಗಳನ್ನು ಖರೀದಿಸೋದು ಈ ಸಂಸ್ಥೆಯ ಹೆಚ್ಚುಗಾರಿಕೆಯಾಗಿದ್ದು ಇದೀಗ ಬಾನರಸ್ ಸಿನಿಮಾದ ಮೇಲೆ ಕೇರಳದಲ್ಲಿ ನಿರಿಕ್ಷೆ ತುಸು ಜಾಸ್ತಿಯಾಗಿಯೇ ಇದೆ.
ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಬನಾರಸ್’, ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಈ ಮೂಲಕ ಕನ್ನಡದ ಕೀರ್ತಿಪತಾಕೆ ರಾಷ್ಟ್ರಮಟ್ಟದಲ್ಲಿ ಹಾರುತ್ತಿದೆ. ಬನಾರಸ್ ಮೂಲಕ ಕನ್ನಡ ಚಿತ್ರರಂಗದ ಘನತೆಗೆ ಮತ್ತೊಂದು ಗರಿ ಮೂಡಲಿದೆ.
