• January 1, 2026

ಸೆಟ್ಟೇರಿತು ಶಶಾಂಕ್, ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ ಹೊಸ ಸಿನಿಮಾ

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಶಶಾಂಕ್ ಮತ್ತೆ ಬ್ಯುಸಿಯಾಗಿದ್ದಾರೆ. ಲವ್ 360 ಸಿನಿಮಾದ ಬಳಿಕ ಶಶಾಂಕ್ ಮತ್ತೊಂದು ಸಿನಿಮಾದಲ್ಲಿ ತೊಡಗಿಕೊಂಡಿದ್ದು ಸದ್ದಿಲ್ಲದೆ ಸಿನಿಮಾದ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ  ಬಣ್ಣ ಹಚ್ಚುತ್ತಿದ್ದಾರೆ. ಸಿಕ್ಸರ್ ಸಿನಿಮಾದ ಮೂಲಕ ನಿರ್ದೇಶಕನಾಗಿ ಸಿನಿ ಜರ್ನಿ ಆರಂಭಸಿದ ಶಶಾಂಕ್ ಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಯಶ್ ಹಾಗೂ ರಾಧಿಕಾ ಪಂಡಿತ್ ನಟನೆಯ ಮೊಗ್ಗಿನ ಮನಸ್ಸು ಸಿನಿಮಾ. ಆ ಬಳಿಕ ಕೃಷ್ಣನ್ ಲವ್ ಸ್ಟೋರಿ, ಬಚ್ಚನ್ , ಮುಂಗಾರು ಮಳೆ 2 ಸೇರಿದಂತೆ ಇನ್ನೂ ಕೆಲ ಸಿನಿಮಾಗಳಿಗೆ ಶಶಾಂಕ್ ಆಕ್ಷನ್ ಕಟ್ ಹೇಳಿದ್ದರು. ಆದರೆ 2018ರ ಬಳಿಕ ಸೈಲೆಂಟ್ ಆಗಿದ್ದ ಶಶಾಂಕ್ ಇದೀಗ ಮತ್ತೆ ಆಕ್ಟೀವ್ ಆಗಿದ್ದಾರೆ. 2018ರಲ್ಲಿ ತೆರೆಕಂಡ ತಾಯಿಗೆ ತಕ್ಕ ಮಗ ಸಿನಿಮಾದ ಬಳಿಕ ಶಶಾಂಕ್ ಸೈಲೆಂಟ್ ಆಗಿದ್ದರು. ಆ ಬಳಿಕ 2022ರಲ್ಲಿ ತೆರೆಕಂಡ ಲವ್ 360 ಸಿನಿಮಾದ ಮೂಲಕ ಮತ್ತೆ ಶಶಾಂಕ್ ಆಕ್ಟೀವ್ ಆಗಿದ್ದು ಲವ್ 360 ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೀಗ ಮತ್ತೊಂದು ಸಿನಿಮಾದ ಮುಹೂರ್ತವನ್ನು ಸದ್ದಿಯಲ್ಲೇ ಮುಗಿಸಿ ಬಿಟ್ಟಿದೆ ಶಶಾಂಕ್ ಎಂಡ್ ಟೀಂ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಶಶಾಂಕ್, ನನ್ನ ನಿರ್ದೇಶನದ ಹೊಸ ಚಿತ್ರದ ಮುಹೂರ್ತ ವಿಜಯ ದಶಮಿಯ ಈ ಶುಭ ದಿನದಂದು ನೆರವೇರಿತು. ಹೊಸ ಪ್ರಯತ್ನಕ್ಕೆ ನಿಮ್ಮ ಹಾರೈಕೆಗಳು ಇರಲಿ ಎಂದಿದ್ದಾರೆ. ಈಗಾಗ್ಲೆ ಕೈತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿರುವ  ನಟ ಡಾರ್ಲಿಂಗ್ ಕೃಷ್ಣ ಶಶಾಂಕ್ ನಟನೆಯ ಮುಂದಿನ ಸಿನಿಮಾದಲ್ಲೂ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಲವ್ ಸ್ಟೋರಿ, ಸಾಹಸ ಪ್ರಧಾನ ಸಿನಿಮಾಗಳ ಮೂಲಕ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿರುವ ಶಶಾಂಕ್, ತಮ್ಮ ಹೊಸ ಸಿನಿಮಾದ ಕುರಿತು ಸದ್ಯದಲ್ಲೇ ಮಾಹಿತಿ ನೀಡಲಿದ್ದಾರೆ. ಇದೇ ಮೊದಲ ಭಾರಿಗೆ ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಒಂದಾಗುತ್ತಿದ್ದು ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now