ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ದುಬಾರಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ ನಟಿ ಮಾಧುರಿ ದೀಕ್ಷಿತ್: ಫ್ಲ್ಯಾಟ್ ವಿಶೇಷತೆಗಳೇನು ಗೊತ್ತಾ?
ಮುಂಬೈನ ಪ್ರತಿಷ್ಠಿತ ಲೋವರ್ ಪರೇಲ್ ಪ್ರದೇಶದಲ್ಲಿ ಬರೋಬ್ಬರಿ 48 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್ ಅನ್ನು ಮಾಧುರಿ ದೀಕ್ಷಿತ್ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಈ ಫ್ಲ್ಯಾಟ್ ಮಾಧುರಿ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಇಂಡಿಯಾ ಬುಲ್ಸ್ ಬ್ಲೂ ಪ್ರಾಜೆಕ್ಟರ್ ನವರಿಂದ ಈ ಫ್ಲ್ಯಾಟ್ ಅನ್ನು ಸೆಪ್ಟೆಂಬರ್ 28 ರಂದು ಮಾಧುರಿ ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ.
ಮಾಧುರಿ ಖರೀದಿಸಿರುವ ಫ್ಲ್ಯಾಟ್ ಸಮುದ್ರದ ಸಮೀಪದಲ್ಲೇ ಇದ್ದು ಅತಿ ಹತ್ತಿರದಿಂದ ಸಮುದ್ರವನ್ನು ನೋಡಬಹುದಾಗಿದೆ. ಈ ಫ್ಲ್ಯಾಟ್ ನಲ್ಲಿ ಜಿಮ್, ಸ್ಪಾ, ಕ್ಲಬ್ ಹೌಸ್, ಈಜುಗೊಳ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿದೆ. 5384 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಫ್ಲ್ಯಾಟ್ ಅಪಾರ್ಟ್ಮೆಂಟ್ ನ 53ನೇ ಮಹಡಿಯಲ್ಲಿ ಇರುವುದು ಮತ್ತೊಂದು ವಿಶೇಷ.
ಈ ಹಿಂದೆ ಬಾಡಿಗೆಗಿದ್ದ ನಟಿ ಮಾಧುರಿ ದೀಕ್ಷಿತ್ 12.5 ಲಕ್ಷ ರೂಪಾಯಿ ಬಾಡಿಗೆ ನೀಡುತ್ತಿದ್ದರು. ಬಾಡಿಗೆ ವಿಷಯದಲ್ಲಿ ಸದ್ದು ಮಾಡಿದ್ದು ಮಾಧುರಿ ಇದೀಗ ದುಬಾರಿ ಬೆಲೆಯ ಫ್ಲ್ಯಾಟ್ ಖರೀದಿಸಿ ಸುದ್ದಿಯಾಗಿದ್ದಾರೆ. ಈ ವರ್ಷದಲ್ಲಿ ಅತಿ ದುಬಾರಿ ಬೆಲೆಯ ಫ್ಲ್ಯಾಟ್ ಖರೀದಿಸಿದ ನಟಿ ಅನ್ನೊ ಹೆಸರನ್ನು ಮಾಧುರಿ ಪಡೆದಿದ್ದಾರೆ.
