ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ದುಬಾರಿ ಮನೆ ಖರೀದಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ಪಲ್ಲವಿ ಜೋಷಿ ದಂಪತಿ ಮುಂಬೈನ ವೆರ್ಸೋವಾದಲ್ಲಿ ದುಬಾರಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ಖರೀದಿಸಿರುವ ಫ್ಲ್ಯಾಟ್ ಗೆ 17.90 ಕೋಟಿ ಎಂದು ಹೇಳಲಾಗುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಇದೀಗ ವಿವೇಕ್ ಅಗ್ನಿಹೋತ್ರಿ ದಂಪತಿ ದುಬಾರಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ವಿವೇಕ್ ಖರೀದಿಸಿರುವ ಫ್ಲ್ಯಾಟ್ 3258 ಚದರ ಅಡಿ ವಿಸ್ತೀರ್ಣದಲ್ಲಿದೆ. ಈ ಫ್ಯ್ಲಾಟ್ ನಲ್ಲಿ ಸುಮಾರು ಮೂರು ಕಾರ್ ಪಾರ್ಕಿಂಗ್ ಗೆ ಅವಕಾಶವಿದೆ. ಮುಂಬೈನ ಎಕ್ಸ್ಟಸಿ ಪ್ರೈವೇಟ್ ಜೋಷಿ ಅನ್ನುವವರಿಂದ ವಿವೇಕ್ ಅಗ್ನಿಹೋತ್ರಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ದಿನನಿತ್ಯದ ಘಟನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ವಿವೇಕ್ ಅಗ್ನಿಹೋತ್ರಿ ಹೊಸ ಮನೆ ಖರೀದಿಸಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.v
