ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ದರ್ಶನ್ ಕ್ರಾಂತಿಗೆ ಹೊಸ ನಾಯಕಿಯ ಎಂಟ್ರಿ: ಕುತೂಹಲ ಮೂಡಿಸಿದ ವೈರಲ್ ಫೋಟೋ
ಈಗಾಗ್ಲೆ ದರ್ಶನ್ ಗೆ ಜೋಡಿಯಾಗುವ ಮೂಲಕ ನಟಿ ರಚಿತಾ ರಾಮ್ ಕ್ರಾಂತಿ ಚಿತ್ರತಂಡಕ್ಕೆ ಎಂಟ್ರಿಕೊಟ್ಟು ಆಲ್ ಮೋಸ್ಟ್ ಶೂಟಿಂಗ್ ಮುಗಿಸಿದ್ದಾರೆ. ಇದೀಗ ಚಿತ್ರತಂಡದಿಂದ ಮತ್ತೊಂದು ಫೋಟೋ ಲೀಕ್ ಆಗಿದೆ. ಅದರಲ್ಲಿ ದರ್ಶನ್, ರಚಿತಾ ರಾಮ್ ಹಾಗೂ ಸಂಯುಕ್ತ ಹೊರನಾಡು ಒಟ್ಟಿಗೆ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿದೆ.
ಕ್ರಾಂತಿ ಸಿನಿಮಾದಲ್ಲಿ ನಟಿ ಸಂಯುಕ್ತ ಹೊರನಾಡು ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇವರುಗಳ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಘಟಾನುಘಟಿ ಕಲಾವಿದರು ‘ಕ್ರಾಂತಿ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
