ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಶೂಟಿಂಗ್ ಶುರು ಮಾಡಿದ ಸಾವರ್ಕರ್ ಸಿನಿಮಾ ತಂಡ: ನಟನೆಯ ಜೊತೆಗೆ ನಿರ್ದೇಶನದ ಜವಬ್ದಾರಿ ಹೊತ್ತ ರಣದೀಪ್
ಕೈಯಲ್ಲಿ ಕ್ಲಾಪ್ ಬೋರ್ಡ್ ಹಿಡಿದುಕೊಂಡು ನಿರ್ಮಾಪಕರ ಜೊತೆ ಫೋಟೋ ತೆಗೆಸಿಕೊಂಡಿರುವ ರಣದೀಪ್ ಹೂಡ, ಸಾವರ್ಕರ್ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿದ್ದಿದೆ ಎಂದೂ ಬರೆದುಕೊಂಡಿದ್ದಾರೆ. ಈ ಸಿನಿಮಾ ನನ್ನಷ್ಟೇ ಎಲ್ಲರನ್ನೂ ಪ್ರಭಾವಿಸಲಿದೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ವೀರ ಸಾವರ್ಕರ್ ಸಿನಿಮಾ ಮಾಡಿದರೆ ಕೊಲ್ಲುವುದಾಗಿ ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರಂತೆ. ಈ ಕುರಿತು ಚಿತ್ರದ ನಿರ್ಮಾಪಕರು ಅಂಬೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈಗಾಗಲೇ ಸಿನಿಮಾದ ಸಿದ್ಧತೆ ನಡೆಸಿದ್ದೇವೆ. ನಾಯಕರ ಆಯ್ಕೆಯಾಗಿದೆ. ವೀರ ಸಾವರ್ಕರ್ ಹುಟ್ಟು ಹಬ್ಬದ ದಿನದಂದು ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಇನ್ನೇನು ಶೂಟಿಂಗ್ ಗೆ ಹೊರಡುವ ಸಂದರ್ಭದಲ್ಲಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಹಾಗಾಗಿ ತಮಗೆ ರಕ್ಷಣೆ ಬೇಕೆಂದು ಸಂದೀಪ್ ಸಿಂಗ್ ದೂರಿನಲ್ಲಿ ದಾಖಲಿಸಿದ್ದರು.
ಪೇಸ್ ಬುಕ್ ನಲ್ಲಿ ಕೊಲೆ ಬೆದರಿಕೆ ಹಾಕಿದ ದುಷ್ಕರ್ಮಿಗಳು ಸಿಧು ಮೂಸೆ ವಾಲ ಹತ್ಯೆಯನ್ನು ನೆನಪಿಸಿಕೊಳ್ಳಿ. ಅದೇ ರೀತಿಯಲ್ಲೇ ನಿನ್ನನ್ನೂ ಕೊಲೆ ಮಾಡಲಾಗುವುದು. ಸ್ವಲ್ಪ ದಿನ ಕಾಯಿರಿ ಎಂದು ಸಂದೇಶವನ್ನು ಪೋಸ್ಟ್ ಮಾಡಿದ್ದಾರಂತೆ.
