• January 1, 2026

ರಿಷಬ್ ಶೆಟ್ಟಿ ಸಿನಿ ಕರಿಯರ್ ನಲ್ಲೇ ಕಾಂತಾರ ಬಿಗೆಸ್ಟ್ ಕಲೆಕ್ಷನ್: ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಳುನಾಡಿನ ಭೂತ ಕೋಲ ಹಾಗೂ ದೈವ ನರ್ತನದ ಕಾನ್ಪೆಪ್ಟ್ ನಲ್ಲಿ ತೆರೆಗೆ ಬಂದಿರುವ ಕಾಂತಾರ ಚಿತ್ರವನ್ನು ಕಾರವಳಿ ಭಾಗದ ಜೊತೆಗೆ ಇಡೀ ವಿಶ್ವದಲ್ಲೇ ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ. ಚಿತ್ರದ ಫಸ್ಟ್ ಲುಕ್ ನಿಂದಲೇ ಸಾಕಷ್ಟು ಗಮನ ಸೆಳೆದ ಕಾಂತಾರ ಸಿನಿಮಾ ತೆರೆಗೆ ಬಂದ ಬಳಿಕ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಮೇಕಿಂಗ್, ಹಾಡುಗಳು, ನಟನೆ ಪ್ರತಿಯೊಂದನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಎಲ್ಲೆಲ್ಲೂ ಕಾಂತಾರ ಸಿನಿಮಾದ ಹೌಸ್ ಫುಲ್ ಬೋರ್ಡ್ ಗಳು ರಾರಾಜಿಸುತ್ತಿದ್ದು ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟಿಗಿನ ಸದ್ದು ಮಾಡುತ್ತಿದೆ.  ಗಲ್ಲ ಪೆಟ್ಟಿಗೆಯಲ್ಲಿ ಕಾಂತಾರ ಕಮಲ್ ಮಾಡುತ್ತಿದ್ದು ಸಿನಿಮಾ ಬಿಡುಗಡೆ ಆದ ಮೂರೇ ದಿನಕ್ಕೆ ಚಿತ್ರತಂಡ ಪ್ರೆಸ್ ಮೀಟ್ ಕರೆದು ಖುಷಿ ಹಂಚಿಕೊಂಡಿದೆ. ಈ ವೇಳೆ ನಟ ರಿಷಬ್ ಶೆಟ್ಟಿ, ನಾಯಕಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಹಾಗೂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸೇರಿ ಹಲವರು ಉಪಸ್ಥಿತರಿದ್ದು, ಕಾರ್ತಿಕ್ ಸಿನಿಮಾದ ಕಲೆಕ್ಷನ್ ಕುರಿತು ಮಾತನಾಡಿದ್ದಾರೆ. ಕಾಂತಾರ ಸಿನಿಮಾ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಚೆನ್ನಾಗಿ ರನ್ ಹಾಗೂ ಕಲೆಕ್ಷನ್ ಮಾಡ್ತಿದೆ. ಮುಕ್ತವಾಗಿ ಹೇಳಬೇಕೆಂದರೆ ರಿಷಬ್ ಶೆಟ್ಟಿ ವೃತ್ತಿ ಜೀವನದಲ್ಲಿಯೇ ಇದು ಬಿಗ್ಗೆಸ್ಟ್ ಕಲೆಕ್ಷನ್ ಮಾಡಿರುವ ಸಿನಿಮಾ. ಆದರೆ ಎಷ್ಟು ಹಣ ಘಳಿಸಿದೆ ಎಂಬುದನ್ನು ಹೇಳುವುದಿಲ್ಲ ಎಂದು ನಗುತ್ತ ಜಾರಿಕೊಂಡರು. ಶುಕ್ರವಾರ ತೆರೆಕಂಡ ಕಾಂತಾರ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳಲ್ಲಿ ವಿಶ್ವದಾದ್ಯಂತ 10 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಲೆಕ್ಕಾಚಾರ ಹೇಳಿದೆ. ಮೂರನೇ ದಿನವಾದ ಭಾನುವಾರದ ಕಲೆಕ್ಷನ್ ಈ ಎರಡು ದಿನಕ್ಕಿಂತ  ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now