• March 17, 2026

ಸ್ವಿಮ್ಮಿಂಗ್ ಪೂಲ್ ನಲ್ಲಿ ಮಿಂದೆದ್ದ ಕಣ್ಸನ್ನೆ ಹುಡುಗಿ: ಪ್ರಿಯಾ ಲುಕ್ ಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್

`ಒರು ಆಡಾರ್ ಲವ್’ ಚಿತ್ರದ ಮೂಲದಲ್ಲಿ ಕಣ್ಸನ್ನೆ ಮಾಡಿ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಪಟ್ಟ ಗಿಟ್ಟಿಸಿಕೊಂಡ ನಟಿ ಪ್ರಿಯಾ ವಾರಿಯರ್ ಮಲಯಾಳಂ ಜೊತೆಗೆ ಸೌತ್ ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮೊದಲ ಸಿನಿಮಾದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಪ್ರಿಯಾ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಸ್ವಿಮ್ ಸೂಟ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ದೂಳೆಬ್ಬಿಸ್ತಿದ್ದಾರೆ. ಕಣ್ಸನ್ನೆ ಮೂಲಕವೇ ಖ್ಯಾತಿ ಘಳಿಸಿದ ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡ ಚಿತ್ರರಂಗಕ್ಕೂ ಕಾಲಿಡಿದ್ದಾರೆ. ಈಗಾಗ್ಲೆ ಶ್ರೇಯಸ್ ಮಂಜು ನಟನೆಯ ಕನ್ನಡದ ವಿಷ್ಣು ಪ್ರಿಯಾ ಸಿನಿಮಾದಲ್ಲಿ ಪ್ರಿಯಾ ವಾರಿಯರ್ ನಟಿಸಿದ್ದು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದರ ಜೊತೆಗೆ ಪ್ರಿಯಾ ನಟನೆ ಮೂರು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಮೂರು ಸಿನಿಮಾಗಳು ಶೂಟಿಂಗ್ ಹಂತದಲ್ಲಿದೆ. ಸಿನಿಮಾ ರಂಗದಲ್ಲಿ ಬಿಗ್ ಬ್ರೇಕ್ ಗಾಗಿ ಪ್ರಿಯಾ ವಾರಿಯರ್ ಕಾಯ್ತಿದ್ದಾರೆ. ಈ ಮಧ್ಯೆ ಪ್ರಿಯಾ ಸ್ವಿಮ್ಮಿಂಗ್ ಸೂಟ್ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಹಾಟ್ ಆಗಿ ಪೋಸ್ ನೀಡಿದ್ದು ಮತ್ತೇರಿಸುವ ಲುಕ್‌ನಲ್ಲಿ ಪಡ್ಡೆ ಹುಡುಗರ ಹಾರ್ಟ್ ಗೆ ಕಿಕ್ ಕೊಟ್ಟಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now