• January 1, 2026

ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರದ ರಿಲೀಸ್ ಡೇಟ್ ಫಿಕ್ಸ್

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಹರ್ಷ ನಾಲ್ಕನೇ ಭಾರಿಗೆ ಒಂದಾಗಿದ್ದಾರೆ. ಭಜರಂಗಿ 2 ಸಿನಿಮಾದ ಬಳಿಕ ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ನ ವೇದ ಸಿನಿಮಾ ರೆಡಿಯಾಗುತ್ತಿದ್ದು ಈಗಾಗ್ಲೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಮಧ್ಯೆ ವೇದ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಹರ್ಷ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಭಜರಂಗಿ, ಭಜರಂಗಿ 2 ಹಾಗೂ ವಜ್ರಕಾಯ ಸಿನಿಮಾಗಳೂ ಸೂಪರ್ ಹಿಟ್ ಆಗಿದ್ದವು. ಹೀಗಾಗಿ ವೇದ ಸಿನಿಮಾದ ಮೇಲೆ ನಿರೀಕ್ಷೆ ತುಸು ದುಪ್ಪಟ್ಟಾಗಿಯೇ ಇದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ವೇದ ಸಿನಿಮಾ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಅಂದರೆ ಡಿಸೆಂಬರ್ 23ರಂದು ತೆರೆಗೆ ಅಪ್ಪಳಿಸಲಿದೆ. ವೇದಾ ಸಿನಿಮಾದಲ್ಲಿ ಶಿವಣ್ಣನಿಗೆ ಜೋಡಿಯಾಗಿ ನಟಿ ಗಾನವಿ ಕಾಣಿಸಿಕೊಂಡಿದ್ದಾರೆ. ಟಿ ಎನ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ಗಾನವಿ ಬಳಿಕ ಕೆಲವೊಂದು ಸಿನಿಮಾದಲ್ಲೂ ನಟಿಸಿದ್ದಾರೆ. ಸದ್ಯ ಹ್ಯಾಟ್ರಿಕ್ ಹೀರೋಗೆ ಜೋಡಿಯಾಗಿ ಗಾಂಧಿನಗರದಲ್ಲಿ ಭರ್ಜರಿ ಸದ್ದು ಮಾಡೋಕೆ ರೆಡಿಯಾಗಿದ್ದಾರೆ. ಇನ್ನೂಳಿದಂತೆ ನಟ ಶ್ವೇತಾ ಚೆಂಗಪ್ಪ, ಉಮಾಶ್ರೀ, ಜಗಪ್ಪ, ರಘು ಶಿವಮೊಗ್ಗ, ವೀಣಾ ಪೊನ್ನಪ್ಪ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗ್ಲೆ ವೇದ ಸಿನಿಮಾದ ಪೋಸ್ಟರ್ ಹಾಗೂ ಟ್ರೈಲರ್ ನೋಡಿ ಅಭಿಮಾನಿಗಳು ಸಿನಿಮಾ ಥಿಯೇಟರ್ ಗೆ ಎಂಟ್ರಿಕೊಡೋದಕ್ಕೆ ಕಾಯ್ತಿದ್ದಾರೆ. 1960ರಲ್ಲಿ ನಡೆದ ನೈಜ ಘಟನೆಯನ್ನು ವೇದ ಸಿನಿಮಾದಲ್ಲಿ ಹೇಳಲಾಗಿದ್ದು ಶಿವಣ್ಣ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now