• January 1, 2026

ಬಹುಭಾಷಾ ನಟನ ಜೊತೆ ಜೋಡಿಸಿದ ಹೊಂಬಾಳೆ ಫಿಲ್ಸಂ: ಫಾಹದ್ ಫಾಸಿಲ್ ಚಿತ್ರಕ್ಕೆ ಲೂಸಿಯಾ ಪವನ್ ನಿರ್ದೇಶನ

ಕಳೆದ ಕೆಲ ದಿನಗಳ ಹಿಂದೆ ಬಹುಭಾಷಾ ನಟ ಫಾಹದ್ ಫಾಸಿಲ್ ಹುಟ್ಟುಹಬ್ಬಕ್ಕೆ ವಿಶ್ ಮಾಡುವ ಮೂಲಕ ಹೊಂಬಾಳೆ ಫಿಲ್ಸಂ ಸೂಚನೆಯೊಂದನ್ನು ನೀಡಿತ್ತು. ಅದೀಗ ನಿಜ ಆಗಿದೆ. ಬಹುಭಾಷಾ ನಟ ಫಾಹದ್ ಜೊತೆ ಸಿನಿಮಾ ಮಾಡೋದಾಗಿ ಹೊಂಬಾಳೆ ಫಿಲ್ಸಂ ಘೋಷಿಸಿದ್ದು ಚಿತ್ರಕ್ಕೆ ಧೂಮಮ್ ಎಂಬ ಟೈಟಲ್ ಇಡಲಾಗಿದೆ. ಕೆಜಿಎಫ್ ಸಿನಿಮಾದ ಮೂಲಕ ಪರಭಾಷೆಯ ಚಿತ್ರರಂಗವನ್ನೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ್ದು ಹೊಂಬಾಳೆ ಫಿಲ್ಮ್ಸ್. ಆ ಬಳಿಕ ಪರಭಾಷೆಯ ಸ್ಟಾರ್ ನಟರ ಸಿನಿಮಾಗಳಿಗೂ ಹೊಂಬಾಳೆ ಬಂಡವಾಳ ಹೂಡುತ್ತಿದೆ. ಸದ್ಯ ಫಾಹದ್ ಫಾಸಿಲ್ ಜೊತೆ ಸಿನಿಮಾ ಮಾಡೋದಾಗಿ ಘೋಷಿಸಿದ್ದು ಚಿತ್ರಕ್ಕೆ ಲೂಸಿಯಾ ಪವನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನಿನ್ನೆ ಈ ಬಗ್ಗೆ ಟ್ವೀಟ್ ಮಾಡಿದ್ದ ಹೊಂಬಾಳೆ ಫಿಲ್ಸಂ ನಾಳೆ ಬೆಳಗ್ಗೆ 10.16ಕ್ಕೆ ಬಿಗ್ ಅನೌನ್ಸ್ ಮೆಂಟ್ ಎಂದು ಟ್ವೀಟ್ ಮಾಡಿ ಸಾಕಷ್ಟು ಕುತೂಹಲ ಕೆರಳಿಸಿದ್ದು. ಇದಕ್ಕಾಗಿ ಕಾದು ಕೂತಿದ್ದ ಅಭಿಮಾನಿಗಳಿಗೆ ಫಾಹದ್ ಜೊತೆ ಸಿನಿಮಾ ಮಾಡೋದಾಗಿ ಹೇಳಿ ಗುಡ್ ನ್ಯೂಸ್ ನೀಡಿದೆ. ಚಿತ್ರದಲ್ಲಿ ಫಾಹದ್ ಜೊತೆ ಜೋಡಿಯಾಗಿ ಅಪರ್ಣಾ ಬಾಲಮುರುಳಿ ಕಾಣಿಸಿಕೊಳ್ತಿದ್ದಾರೆ. ಅಕ್ಟೋಬರ್ 9ರಿಂದ ಶೂಟಿಂಗ್ ಆರಂಭವಾಗಲಿದ್ದು 2023ರ ವೇಳೆಗೆ ಸಿನಿಮಾ ಬಿಡುಗಡೆ ಮಾಡೋ ಪ್ಲಾನ್ ನಲ್ಲಿದೆ ಚಿತ್ರತಂಡ. ಸದ್ಯ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಪ್ರಭಾಸ್ ನಟನೆಯ ಸಲಾರ್, ಶ್ರೀಮುರುಳಿ ನಟನೆಯ ಬಘೀರ, ಜಗ್ಗೇಶ್ ನಟನೆಯ ರಾಘವೇಂದ್ರ ಸಿನಿಮಾಗಳು ರೆಡಿಯಾಗುತ್ತಿದೆ. ಇದ್ರ ಜೊತೆಗೆ ಇಂದು ಬಿಡುಗಡೆ ಆಗಿರೋ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾವು ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ಸಿನಿಮಾಗೂ ಹೊಂಬಾಳೆ ಫಿಲ್ಸಂ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now