• March 15, 2026

‘ಜೂನಿಯರ್’ ಆದ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ: ಕೊನೆಗೂ ರಿವೀಲ್ ಆಯ್ತು ಮೊದಲ ಸಿನಿಮಾದ ಟೈಟಲ್

ರಾಮಕಾರಣಿಗಳ ಮಕ್ಕಳು ಈಗಾಗ್ಲೆ ಸಿನಿಮಾ ರಂಗದಲ್ಲಿ ಸದ್ದು ಮಾಡಿರೋದು ಗೊತ್ತೆ ಇದೆ. ಇದೀಗ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ಗಾಂಧಿನಗರಕ್ಕೆ ಗ್ರ್ಯಾಂಡ್ ಆಗಿ ಲಾಂಚ್ ಆಗಿದ್ದು ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಕಿರಿಟಿ ನಟನೆಯ ಸಿನಿಮಾದ ಶೂಟಿಂಗ್ ಆರಂಭವಾಗಿ ಸಾಕಷ್ಟು ತಿಂಗಳುಗಳೆ ಕಳೆದಿದೆ. ಆದರೆ ಟೈಟಲ್ ಮಾತ್ರ ಯಾವುದು ಅನ್ನೋದು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಇದೀಗ ಕಿರೀಟಿ ಹುಟ್ಟುಹಬ್ಬದ ಪ್ರಯುಕ್ತ ಟೈಟಲ್ ಅನಾವರಣ ಮಾಡಲಾಗಿದ್ದು ಇದೀಗ ಕಿರೀಟಿ ‘ಜೂನಿಯರ್’ ಆಗಿದ್ದಾರೆ. ಕಿರೀಟಿ ನಟನೆಯ ಸಿನಿಮಾದ ಶೂಟಿಂಗ್ ಆರಂಭವಾಗಿ ಕೆಲ ಸಮಯವೇ ಕಳೆದಿದೆ. ಈಗಾಗ್ಲೆ ಇಂಟ್ರಡಕ್ಷನ್ ಟೀಸರ್ ಮೂಲಕ ಗಮನ ಸೆಳೆದಿರೋ ಕಿರೀಟಿ ನಟನೆಯ ಸಿನಿಮಾದ ಟೈಟಲ್ ಏನು ಎಂಬುದನ್ನು ಚಿತ್ರತಂಡ ಸಖತ್ ಸಸ್ಪೆನ್ಸ್ ಆಗಿಯೇ ಉಳಿಸಿಕೊಂಡಿತ್ತು. ಇದೀಗ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದ್ದು ಚಿತ್ರಕ್ಕೆ ಜೂನಿಯರ್ ಎಂದು ಶೀರ್ಷಿಕೆ ಇಡಲಾಗಿದೆ.  ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಈ ಸಿನಿಮಾಗೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಬಂಡವಾಳ ಹೂಡಿದೆ. ಇದು ವಾರಾಹಿ ಸಂಸ್ಥೆಯ 15ನೇ ಸಿನಿಮಾವಾಗಿದ್ದು ಸಾಕಷ್ಟು ಅದ್ದೂರಿಯಾಗಿ ಸಿನಿಮಾ ರೆಡಿಯಾಗುತ್ತಿದೆ. ಕನ್ನಡ ಜೊತೆಗೆ ತೆಲುಗಿನಲ್ಲೂ ಈ ಸಿನಿಮಾ ನಿರ್ಮಾಣವಾಗಿದ್ದು ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕಿರೀಟಿ ಸಿನಿಮಾದ ಮೂಲಕ ಸಾಕಷ್ಟು ವರ್ಷಗಳ ಬಳಿಕ ನಟಿ ಜೆನಿಲಿಯಾ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಕಿರೀಟಿಗೆ ಸಾಥ್ ನೀಡಿದ್ದಾರೆ. ಮೊದಲ ಸಿನಿಮಾದಲ್ಲೇ ಸಾಕಷ್ಟು ಭರವಸೆ ಮೂಡಿಸಿರೋ ಕಿರೀಟಿ ನಟನೆಯ ಜೂನಿಯರ್ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಕಾರಣದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಿರೀಟಿ ಗುರುತಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಭಾಷೆಗಳಿಗೂ ಸೂಟ್ ಆಗುವ ಟೈಟಲ್ ಅನ್ನೇ ಚಿತ್ರತಂಡ ಸೆಲೆಕ್ಟ್ ಮಾಡಿದ್ದು ಜೂನಿಯರ್ ಟೈಟಲ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now