• March 20, 2026

ಮೇಘನಾ ರಾಜ್ ಸಿನಿಮಾಗೆ ಎಂಟ್ರಿಕೊಟ್ಟ ನಟ ಪ್ರಜ್ವಲ್ ದೇವರಾಜ್: ಪೊಲೀಸ್ ಪಾತ್ರದಲ್ಲಿ ಡೈನಾಮಿಕ್ ಪ್ರಿನ್ಸ್

ಕೆಲ ಸಮಯ ಸಿನಿಮಾ ರಂಗದಿಂದ ದೂರವಾಗಿದ್ದ ನಟಿ ಮೇಘನಾ ರಾಜ್ ಇತ್ತೀಚೆಗೆ ಹಿರಿತೆರೆಯ ಜೊತೆ ಕಿರುತೆರೆಯಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಚಿರು ಗೆಳೆಯರ ಜೊತೆ ಕೈ ಜೋಡಿಸಿರೋ ಮೇಘನಾ ರಾಜ್ ಈಗಾಗ್ಲೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು ಇದೀಗ ಚಿತ್ರತಂಡಕ್ಕೆ ಮತ್ತೊಬ್ಬ ನಾಯಕನ ಎಂಟ್ರಿಯಾಗಿದೆ. ಸಿನಿಮಾ ರಂಗದಲ್ಲಿ ಸಾಕಷ್ಟು ಮಂದಿಯ ಜೊತೆ ಉತ್ತಮ ಬಾಂದವ್ಯ ಹೊಂದಿದ್ದ ನಟ ಚಿರಂಜೀವಿ ಸರ್ಜಾ ನಿಧನ ಪ್ರತಿಯೊಬ್ಬರಿಗೂ ನುಂಗಲಾರದ ತುತ್ತಾಗಿತ್ತು. ಚಿರು ನಿಧನದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಮೇಘನಾ ರಾಜ್ ಬಳಿಕ ಮಗನ ಆರೈಕೆಯಲ್ಲಿ ತೊಡಗಿಕೊಂಡರು. ಇದೀಗ ಚಿರು ಗೆಳೆಯರ ಒತ್ತಾಯದ ಮೇರೆಗೆ ಮೇಘನಾ ರಾಜ್ ಮತ್ತೆ ಬಣ್ಣದ ಬದುಕಿನತ್ತ ವಾಲಿದ್ದಾರೆ. ಸದ್ಯ ಚಿರಂಜೀವಿ ಸರ್ಜಾ ಸ್ನೇಹಿತ ಪನ್ನಗಾ ಭರಣ ನಿರ್ದೇಶನದ ಸಿನಿಮಾದಲ್ಲಿ ಮೇಘನಾ ರಾಜ್ ನಟಿಸುತ್ತಿದ್ದಾರೆ. ಮೇಘನಾಗೆ ಸೂಟ್ ಆಗೋ ಪಾತ್ರವನ್ನೇ ಪನ್ನಗಾಭರಣ ಹೆಣೆದಿದ್ದಾರೆ. ಇದೀಗ ಸಿನಿಮಾ ತಂಡಕ್ಕೆ ನಟ ಪ್ರಜ್ವಲ್ ದೇವರಾಜ್ ಎಂಟ್ರಿಕೊಟ್ಟಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಇದುವರೆಗೂ ಚಿತ್ರತಂಡ ಟೈಟಲ್ ರಿವೀಲ್ ಮಾಡಿಲ್ಲ ಚಿತ್ರತಂಡ. ಮುಂದಿನ ತಿಂಗಳು ಅಕ್ಟೋಬರ್ 7ರಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬವಿದ್ದು ಅಂದೇ ಚಿತ್ರದ ಶೀರ್ಷಿಕೆ ರಿವೀಲ್ ಆಗಲಿದೆ.  ಮೂಲಗಳ ಪ್ರಕಾರ ಪ್ರಜ್ವಲ್ ದೇವರಾಜ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now