• January 1, 2026

ಬಿಡುಗಡೆ ಹೊಸ್ತಿನಲ್ಲೇ ‘ಪೊನ್ನಿಯಲ್ ಸೆಲ್ವನ್’ ಗೆ ಎದುರಾಯ್ತು ಸಂಕಷ್ಟ: ಚಿತ್ರ ರಿಲೀಸ್ ಮಾಡಿದ್ರೆ ದಾಳಿ ಮಾಡ್ತೀವಿ ಎಂದು ಬೆದರಿಕೆ

ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಗೆ ಇನ್ನೊಂದು ದಿನ ಮಾತ್ರವೇ ಭಾಕಿ ಇದೆ. ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ತಮಿಳಿನ ಜೊತೆಗೆ ಕನ್ನಡ, ತೆಲುಗು ಭಾಷೆಗಳಿಗೂ ಡಬ್ ಆಗಿ ಬಿಡುಗಡೆ ಆಗುತ್ತಿದೆ. ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಿರುವ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು ಇದೀಗ ರಿಲೀಸ್ ಸಂದರ್ಭದಲ್ಲಿ ಸಂಕಷ್ಟವೊಂದು ಎದುರಾಗಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾ ನಾಳೆ(ಸೆ.30)ರಂದು ಬಿಡುಗಡೆ ಆಗುತ್ತಿದೆ. ಈ ವೇಳೆ ಸಿನಿಮಾ ರಿಲೀಸ್ ಮಾಡಿದರೆ ದಾಳಿ ಮಾಡುತ್ತೇವೆ ಎಂಬ ಎಚ್ಚರಿಕೆ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇದರಿಂದ ಇಡೀ ಚಿತ್ರತಂಡ ಚಿಂತೆಗೆ ಒಳಗಾಗಿದೆ. ಕೆನನಾಡದಲ್ಲಿ ಪೊನ್ನಿಯನ್ ಸೆಲ್ವನ್ ಸಿನಿಮಾ ಬಿಡುಗಡೆಗೆ ಬೆದರಿಕೆ ಹಾಕಲಾಗಿದೆ. ಮೊದಲಿನಿಂದಲೂ ದಕ್ಷಿಣ ಭಾರತದ ಸಿನಿಮಾಗಳು ಕೆನಡಾದಲ್ಲಿ ಬಿಡುಗಡೆ ಆಗುತ್ತವೆ ಎಂದರೆ ಸಾಕಷ್ಟು ಬೆದರಿಕೆ ಎದುರಾಗುತ್ತವೆ. ಈ ಬಾರಿಪೊನ್ನಿಯನ್ ಸೆಲ್ವನ್ ಸಿನಿಮಾಗೂ ಅದೇ ರೀತಿ ಆಗಿದೆ. ಹ್ಯಾಮಿಲ್ಟನ್, ಲಂಡನ್ ಮೊದಲಾದ ಕಡೆಗಳಲ್ಲಿ ಚಿತ್ರಮಂದಿರದ ಮಾಲೀಕರಿಗೆ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಮಾಡದಂತೆ ಬೆದರಿಕೆ ಹಾಕಲಾಗಿದೆ. ವಿದೇಶದಲ್ಲಿ ಪೊನ್ನಿಯನ್ ಸೆಲ್ವನ್ ಸಿನಿಮಾದ ಹಂಚಿಕೆಯನ್ನು ಪಡೆದುಕೊಂಡಿರುವ ಕೆಡಬ್ಲ್ಯೂ ಟಾಕೀಸ್ ಟ್ವೀಟ್ ಮಾಡಿದ್ದು, ‘ಹ್ಯಾಮಿಲ್ಟನ್, ಲಂಡನ್ ಮೊದಲಾದ ಭಾಗಗಳ ಚಿತ್ರಮಂದಿರದ ಮಾಲೀಕರಿಂದ ನಮಗೆ ಅಪ್​ಡೇಟ್ ಸಿಕ್ಕಿದೆ. ಇವರಿಗೆ ಬೆದರಿಕೆ ಇ-ಮೇಲ್ ಬಂದಿದ್ದು, ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಮಾಡಿದರೆ ದಾಳಿ ಮಾಡುವ ಬೆದರಿಕೆ ಹಾಕಲಾಗಿದೆ’ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯನ್ ಸೆಲ್ವಂ ಕಥೆಯನ್ನಾದರಿಸಿ ಪೊನ್ನಿಯನ್ ಸೆಲ್ವನ್ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸ್ಟಾರ್ ಕಲಾವಿದರಾದ ಐಶ್ವರ್ಯರೈ ಬಚ್ಚನ್, ತ್ರಿಷಾ, ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಪ್ರಕಾಶ್ ರಾಜ್ ಸೇರಿದಂತೆ ಇನ್ನೂ ಸಾಕಷ್ಟು ಮಂದಿ ಬಣ್ಣ ಹಚ್ಚಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now