• March 16, 2026

ಝೈದ್ ಖಾನ್ ಸಿನಿಮಾದ ಮೇಲೆ ಹೆಚ್ಚಾಯ್ತು ನಿರೀಕ್ಷೆ: 4 ಮಿಲಿಯನ್ ವೀವ್ಸ್ ಪಡೆದ ‘ಬನಾರಸ್’ ಟ್ರೈಲರ್

ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಈಗಾಗ್ಲೆ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿರುವ ಝೈದ್ ಖಾನ್ ಗಾಂಧಿನಗರದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗ್ತಿದೆ. ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದಿರೋ ಬನಾರಸ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಯುಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾದ ಟ್ರೈಲರ್ ಇದೇ ಸೋಮವಾರ (ಸೆ.26) ರಂದು ಐದು ಭಾಷೆಯಲ್ಲಿ ರಿಲೀಸ್ ಆಗಿದೆ. ಟ್ರೈಲರ್ ನೋಡಿದ ಪ್ರತಿಯೊಬ್ಬರು ಝೈದ್ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟು ಐದು ಭಾಷೆಗಳಿಂದ ಸೇರಿ ಸುಮಾರು 40 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ. ರಾಜಕೀಯ ಕುಟುಂಬದಿಂದ ಬಂದ ಝೈದ್ ಖಾನ್ ಬಣ್ಣದ ಬದುಕನ್ನು ಆಯ್ಕೆ ಮಾಡಿಕೊಂಡಿದ್ದು ಇಲ್ಲಿಯೇ ನೆಲೆ ನಿಲ್ಲುವ ಸೂಚನೆ ನೀಡಿದ್ದಾರೆ. ಮೊದಲ ಸಿನಿಮಾದ ಟ್ರೈಲರ್ ನಲ್ಲೇ ಪ್ರೇಕ್ಷಕರ ಮನಸ್ಸು ಗೆದ್ದಿರೋ ಝೈದ್ ಖಾನ್ ಮೇಲೆ ಗಾಂಧಿನಗರದಲ್ಲಿ ಮತ್ತಷ್ಟು ನಿರೀಕ್ಷೆ ಮೂಡಿದೆ. ಝೈದ್ ಗೆ ಜೋಡಿಯಾಗಿ ನಟಿ ಸೋನಲ್ ಮಾಂಥೆರೋ ಕಾಣಿಸಿಕೊಂಡಿದ್ದು ಇಬ್ಬರ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಟೈಮ್ ಟ್ರಾವೆಲಿಂಗ್​ ಪರಿಕಲ್ಪನೆ ಅಡಿಯಲ್ಲಿ ‘ಬನಾರಸ್​’ ಸಿನಿಮಾ ಮೂಡಿ ಬಂದಿದ್ದು ಇದರ ಜೊತೆಗೆ ಮುದ್ದಾದ ಲವ್ ಸ್ಟೋರಿ ಕೂಡ ಇದೆ. ನವೆಂಬರ್ 4ರಂದು ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದ್ದು ಚಿತ್ರ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now