• January 1, 2026

ಮಗನ ಮದುವೆಯ ಬಳಿಕ ಇಷ್ಟ ಪಟ್ಟು ಕಟ್ಟಿಸಿದ ಮನೆ ಬದಲಾಯಿಸಿದ ರವಿಚಂದ್ರನ್: ಇಲ್ಲಿದೆ ಅಸಲಿ ಕಾರಣ

ಸ್ಯಾಂಡಲ್ ವುಡ್ ಸಿನಿ ರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಎಷ್ಟು ಫೇಮಸ್ಸೋ ಅಷ್ಟೇ ಫೇಮಸ್ ರಾಜಾಜಿನಗರದಲ್ಲಿರುವ ಅವರ ನಿವಾಸ. ರವಿಚಂದ್ರನ್ ಮನೆ ಎಲ್ಲಿದೆ ಎಂದರೆ ಯಾರು ಬೇಕಾದರೂ ಹೇಳುತ್ತಾರೆ ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಮನೆ ಎಂದು. ಅಷ್ಟು ಫೇಮಸ್ ಆಗಿತ್ತು ರವಿಚಂದ್ರನ್ ಅವರ ಮನೆ. ಇದೀಗ ನಟ ರವಿಚಂದ್ರನ್ ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ರವಿಚಂದ್ರನ್ ಸ್ಪಷ್ಟನೆ ನೀಡಿದ್ದಾರೆ. ದೊಡ್ಡ ಮಗನ ಮದುವೆಯ ಬಳಿಕ ರವಿಚಂದ್ರನ್ ರಾಜಾಜಿನಗರದ ರಾಜಕುಮಾರ ರಸ್ತೆಯಲ್ಲಿರುವ ಮನೆ ಬದಲಾಯಿಸಿದ್ದಾರೆ. ಅಂದ ಹಾಗೆ ಸಾಕಷ್ಟು ವರ್ಷಗಳ ಹಿಂದೆಯೇ ಈ ಮನೆಯನ್ನು ಬದಲಾಯಿಸಬೇಕು ಎಂದು ರವಿಚಂದ್ರನ್ ನಿರ್ಧಾರ ಮಾಡಿದ್ದರು. ಆದರೆ ಈ ಮನೆಯ ಜೊತೆ ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ಭಾವನಾತ್ಮಕ ಸಂಬಂಧ ಹೊಂದಿದ್ದರು. ಹೀಗಾಗಿ ಮನೆ ಬದಲಾವಣೆ ಮಾಡುವುದು ಅವರಿಗೆ ಇಷ್ಟವಿರಲ್ಲಿಲ್ಲ. ಈ ವರ್ಷ ಪಟ್ಟಮ್ಮಾಳ್ ಮೃತಪಟ್ಟಿದ್ದು ತಾಯಿ ನಿಧನದ ಹಲವು ತಿಂಗಳ ಬಳಿಕ ರವಿಚಂದ್ರನ್ ಇಂಥದೊಂದು ನಿರ್ಧಾರ ಮಾಡಿದ್ದಾರೆ. ಮಗನ ಮದುವೆಯಾದ ಬಳಿಕ ಅವರು ಬೇರೆ ಮನೆಯಲ್ಲಿ ವಾಸಿಸುತ್ತಾರೆ ಎಂಬುದು ಮೊದಲೆ ನಿರ್ಧರಿಸಿದ್ದರು. ಆದರೆ ಒಮ್ಮೆಲ್ಲೇ ಅವರನ್ನು ಬೇರೆಡೆಗೆ ಕಳುಹಿಸಿದರೆ ಚೆನ್ನಾಗಿ ಇರುವುದಿಲ್ಲ. ಒಂದಷ್ಟು ದಿನ ನಾವು ಅವರ ಜೊತೆಗಿರೋಣ ಎಂಬ ಕಾರಣಕ್ಕೆ ರವಿಚಂದ್ರನ್ ಬೇರೆ ಮನೆ ಮಾಡಿದ್ದಾರೆ. ಕ್ರೇಜಿಸ್ಟಾರ್ ಗೆ ವಾಸ್ತು ಮೇಲೆ ಸಾಕಷ್ಟು ನಂಬಿಕೆ. ಹೀಗಾಗಿ ಈಮನೆಯನ್ನೂ ಸಾಕಷ್ಟು ಭಾರಿ ವಾಸ್ತು ಪ್ರಕಾರ ಬದಲಾಯಿಸಿದ್ದರು. ಇದೀಗ ಮನೆ ಬದಲಾಯಿಸುವುದೇ ಸೂಕ್ತ ಎಂಬ ಕಾರಣಕ್ಕೆ ರವಿಚಂದ್ರನ್ ಈ ಧೃಡ ನಿರ್ಧಾರ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now