ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಶಾರುಖ್ ಖಾನ್ ಸಿನಿಮಾಗೆ ಬಂಡವಾಳ ಹೂಡಲಿರೋ ಹೊಂಬಾಳೆ ಫಿಲ್ಮ್ಸ್?
ವಿಜಯ್ ಕಿರಗಂದೂರು ಸಾರಥ್ಯದ ಹೊಂಬಾಳೆ ಫಿಲ್ಮ್ಸ್ ಸದ್ಯದಲ್ಲೇ ಬಾಲಿವುಡ್ ಅಂಗಳಕ್ಕೆ ಎಂಟ್ರಿಕೊಡುತ್ತಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನಟನೆಯ ಸಿನಿಮಾಗೆ ಹಣ ಹೂಡಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಬಗ್ಗೆ ಈಗಾಗ್ಲೆ ಶಾರುಖ್ ಖಾನ್ ಜೊತೆ ಮಾತುಕತೆ ನಡೆಸಿದ್ದು ಮುಂದಿನ ವರ್ಷವೇ ಸಿನಿಮಾ ಆರಂಭವಾಗಲಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಹೊಂಬಾಳೆ ಸಂಸ್ಥೆಯಾಗಲಿ ಅಥವಾ ಶಾರುಖ್ ಖಾನ್ ಆಗಲಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಜೊತೆಗೆ ಯಾರು ನಿರ್ದೇಶಕ ಅನ್ನೋ ಗುಟ್ಟು ಕೂಡ ರಟ್ಟಾಗಿಲ್ಲ. ಸದ್ಯ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕಾಂತರ ಹಾಗೂ ರಾಘವೇಂದ್ರ ಸ್ಟ್ರೋರ್ಸ್ ಸಿನಿಮಾಗಳು ಬಿಡುಗಡೆ ಹಾದಿಯಲ್ಲಿದೆ.
