ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸೋಷಿಯಲ್ ಮೀಡಿಯಾದಿಂದ 3 ಲಕ್ಷ ಸಂಭಾವನೆ ಪಡೆಯೋ ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಪಡೆದಿದೆಷ್ಟು ಗೊತ್ತಾ?
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಖ್ಯಾತಿ ಘಳಿಸಿದ ಸೋನು ತಿಂಗಳಿಗೆ ಸೋಷಿಯಲ್ ಮೀಡಿಯಾದಿಂದ 3 ಲಕ್ಷ ಸಂಭಾವನೆ ಪಡೆದುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಸೋನು ಸಂಭಾವನೆ ಕೇಳಿದ ಸಾಕಷ್ಟು ಮಂದಿ ಅಚ್ಚರಿ ಪಟ್ಟುಕೊಂಡಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ತಾವು ಪಡೆದ ಸಂಭಾವನೆಯ ಬಗ್ಗೆ ಮಾತನಾಡಿದ್ದಾರೆ.
ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಹೋಗುವವರಿಗೆ ಎಷ್ಟು ಸಂಭಾವನೆ ಕೊಡುತ್ತಾರೆ ಎನ್ನುವುದು ಪಕ್ಕ ಯಾರು ಹೇಳುವುದಿಲ್ಲ. ಅವರವರ ವ್ಯಕ್ತಿತ್ವಕ್ಕೆ ತಕ್ಕಂತೆ ಸಂಭಾವನೆ ನಿಗದಿ ಮಾಡಲಾಗುತ್ತದೆ. ಅಲ್ಲದೆ ಸಂಭಾವನೆಯನ್ನು ಯಾರ ಜೊತೆಯೂ ಶೇರ್ ಮಾಡಬಾರದು ಎಂಬ ನಿಯಮ ಕೂಡ ಇರುತ್ತದೆ.ಅಂತೆಯೇ ಸೋನು ಗೌಡ ಕೂಡ ತಮ್ಮ ಸಂಭಾವನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಿಂದ ಬರುವ ಸಂಭಾವನೆ ಬಗ್ಗೆ ಮಾತನಾಡಿದ ಸೋನು ಗೌಡ ಬಿಗ್ ಬಾಸ್ ಓಟಿಟಿ ಮನೆಯಲ್ಲಿ ತಮ್ಮಗೆ ಸಿಕ್ಕಿರುವ ಸಂಭಾವನೆ ಬಗ್ಗೆ ಮಾತನಾಡಲು ನೋ ಎಂದಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ತಾವು ಪಡೆದ ಸಂಭಾವನೆಯನ್ನು ಹೇಳಲಾಗುವುದಿಲ್ಲ. ಒಂದು ವೇಳೆ ಹೇಳಿಕೊಂಡರೆ ಅದು ನನಗೆ ನೆಗೆಟಿವ್ ಆಗಬಹುದು ಎಂದಿದ್ದಾರೆ.
ಇನ್ನೂ ಸೋನು ಗೌಡಗೆ ನಾಯಕಿಯಾಗಬೇಕು ಅನ್ನೋ ಆಸೆ ಇದೆಯಂತೆ. ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮುನ್ನವೇ ಕೆಲವೊಂದು ಆಫರ್ ಬಂದಿದ್ದು ಅದನ್ನು ಸೋನು ನಿರಾಕರಿಸಿದ್ದಾರೆ. ದೊಡ್ಡ ಬ್ಯಾನರ್ ನಲ್ಲಿ ನಾಯಕಿಯಾಗ್ಬೇಕು ಅನ್ನೋದು ಸೋನು ಕನಸು.
