• June 17, 2026

ವಿಷ ಹಾಕಿ ಕೊಲ್ಲುವ ಪ್ರಯತ್ನ ಮಾಡಿದ್ದರು: ನಟಿ ತನುಶ್ರೀ ದತ್ತ ಶಾಕಿಂಗ್ ಹೇಳಿಕೆ

ಸಿನಿ ರಂಗದಲ್ಲಿ ಮೀ ಟೂ ಅಭಿಯಾನ ಶುರು ಮಾಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ನಟಿ ತನುಶ್ರೀ ದತ್ತ ಇಡೀ ಬಾಲಿವುಡ್ ಚಿತ್ರರಂಗವನ್ನೇ ಎದುರು ಹಾಕಿಕೊಂಡಿದ್ದರು. ತನುಶ್ರೀ ದತ್ತ ಮೀಟೂ ಆರೋಪದ ಬಳಿಕ ಸಾಕಷ್ಟು ನಟಿಯರು ತಮಗೆ ಸಿನಿಮಾ ರಂಗದಲ್ಲದ್ದ ಕಿರುಕುಳದ ಬಗ್ಗೆ ಬಾಯಿ ಬಿಟ್ಟಿದ್ದರು. ಇದೀಗ ತನಶ್ರೀ ದತ್ತ ತಮ್ಮ ಮೇಲಾದ ಕೊಲೆ ಯತ್ನದ ಬಗ್ಗೆ ಮಾತನಾಡಿದ್ದಾರೆ. ತನುಶ್ರೀ ದತ್ತ ತನಗೆ ಹಾಗೂ ತನ್ನ ಮೇಲಾದವರ ಮೇಲೆ ನಡೆದ ಕಿರುಕುಳದ ಬಗ್ಗೆ ಮಾತನಾಡಿದ ಬಳಿಕ ಇಡೀ ಬಾಲಿವುಡ್ ಸಿನಿ ರಂಗವೇ ಅವರ ವಿರುದ್ಧ ತಿರುಗಿ ಬಿದ್ದಿದೆ. ಹೀಗಾಗಿ ಅವರನ್ನು ಸಾಕಷ್ಟು ಬಗೆಯಲ್ಲಿ ಕೊಲ್ಲುವ ಪ್ರಯತ್ನವನ್ನು ಮಾಡಲಾಗಿತ್ತು ಎಂಬುದನ್ನು ತನುಶ್ರೀ ದತ್ತ ಬಾಯಿ ಬಿಟ್ಟಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ತನುಶ್ರೀ ದತ್ತ, ತನ್ನ ಮೇಲೆ ಹಲವು ಬಾರಿ ಕೊಲೆ ಪ್ರಯತ್ನ ಮಾಡಲಾಗಿತ್ತು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಕಾರಿನ ಬ್ರೇಕ್ ಫೇಲ್ ಮಾಡಲಾಗಿತ್ತು, ಕುಡಿಯುವ ನೀರಿಗೆ ವಿಷ ಹಾಕಲಾಗಿತ್ತು ಎಂದಿದ್ದಾರೆ. ‘ಒಂದೆರಡು ಬಾರಿ ನನ್ನ ಕಾರಿನ ಬ್ರೇಕ್​ ಫೇಲ್​ ಮಾಡಿಸಿದರು. ಅದರಿಂದ ನನಗೆ ಒಮ್ಮೆ ಅಪಘಾತವಾಯಿತು. ನನ್ನ ಮೂಳೆ ಮುರಿಯಿತು. ಇದರಿಂದ ಚೇತರಿಸಿಕೊಳ್ಳಲು ನನಗೆ ಹಲವು ತಿಂಗಳುಗಳೇ ಬೇಕಾದವು. ನಮ್ಮ ಮನೆಯಲ್ಲಿ ಓರ್ವ ಕೆಲಸದವಳು ಇದ್ದಳು. ಆಕೆಯನ್ನು ಯಾರೋ ನಮ್ಮ ಮನೆಗೆ ಬೇಕಂತಲೇ ಕಳಿಸಿದ್ದರು ಎನಿಸುತ್ತದೆ. ಕುಡಿಯುವ ನೀರಿನಲ್ಲಿ ಆಕೆ ಏನೋ ಬೆರೆಸುತ್ತಿದ್ದಳು ಎಂಬುದು ನನ್ನ ಅನುಮಾನ. ಯಾಕೆಂದರೆ ನನ್ನ ಆರೋಗ್ಯ ಹದಗೆಟ್ಟಿತು’ ಎಂದು ತನುಶ್ರೀ ದತ್ತಾ ಆರೋಪ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now