ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಟಾಪ್ 10 ನಟಿಯರ ಪಟ್ಟಿಯಲ್ಲಿ ಸಮಂತಾ: ಬಿಟೌನ್ ಸ್ಟಾರ್ ನಟಿಯರನ್ನೇ ಹಿಂದಿಕ್ಕಿದ ಸ್ಯಾಮ್
ಆರ್ಮ್ಯಾಕ್ಸ್ ಇಂಡಿಯಾ ಬಿಡುಗಡೆ ಮಾಡಿರುವ ಭಾರತದ ಟಾಪ್ 10 ನಟಿಯರ ಸಾಲಿನಲ್ಲಿ ನಟಿ ಸಮಂತಾ ನಂಬರ್ 1 ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಬಾಲಿವುಡ್ ಸ್ಟಾರ್ ನಟಿಯರಾದ ಅಲಿಯಾ ಭಟ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಸೇರಿದಂತೆ ಅನೇಕ ಸ್ಟಾರ್ ನಟಿಯರನ್ನ ಸಮಂತಾ ಹಿಂದಿಕ್ಕಿದ್ದಾರೆ. ಟಾಪ್ 10 ನಟಿಯರ ಸಾಲಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಕೊಡಗಿನ ಕುವರಿ ರಶ್ಮಿಕಾ ಟಾಪ್ ನಟಿಯರ ಸಾಲಿನಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ.
ಟಾಪ್ 10 ಲಿಸ್ಟ್ ನಲ್ಲಿ ಮೊದಲ ಸ್ಥಾನ ಸಮಂತಾ ಪಡೆದರೆ ಎರಡನೇ ಸ್ಥಾನ ಅಲಿಯಾ ಭಟ್ ಪಡೆದುಕೊಂಡಿದ್ದಾರೆ. ನಯನತಾರಾ, ಕಾಜಲ್ ಅಗರ್ವಾಲ್, ದೀಪಿಕಾ ಪಡುಕೋಣೆ, ರಶ್ಮಿಕಾ ಮದಂಣ್ಣ, ಕೀರ್ತಿ ಸುರೇಶ್, ಕತ್ರಿನಾ ಕೈಫ್, ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
