ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪುನೀತ್ ರಾಜ್ ಕುಮಾರ್ ಇಲ್ಲದೆ ನನ್ನ ಮನಸ್ಸು ಒಡೆದಿದೆ: ನಟಿ ತ್ರಿಷಾ
ಕಾರ್ಯಕ್ರಮದಲ್ಲಿ ಮಾತನಾಡಿದ ತ್ರಿಷಾ, ನಾನು ಈ ಹಿಂದೆ ಪವರ್ ಸಿನಿಮಾದ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ನಾನು ಕೆಲ ದಿನಗಳ ಕಾಲ ಇಲ್ಲಿ ಚಿತ್ರೀಕರಣ ನಡೆಸಿದ್ದೆ. ಪುನೀತ್ ರಾಜ್ ಕುಮಾರ್ ಅವರನ್ನು ನಾನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಎಂದರು.
ಪುನೀತ್ ರಾಜ್ ಕುಮಾರ್ ಹಾಗೂ ನಾನು ಒಟ್ಟಿಗೆ ದ್ವಿತ್ವ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಆ ವೇಳೆಗೆ ದುರ್ಘಟನೆ ನಡೆಯಿತು. ಅವರೊಟ್ಟಿಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಕಳೆದುಕೊಂಡೆ. ಈಗಲೂ ನಾನು ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹೃದಯ ಒಡೆದಿದೆ. ಅವರ ನೆನಪು ಸದಾ ನನ್ನೊಂದಿಗೆ ಹಾಗೆಯೇ ಉಳಿಯಲಿದೆ ಎಂದರು.
