• March 16, 2026

‘ರೆಡ್ ಕಾಲರ್’ ಮೂಲಕ ಬಾಲಿವುಡ್ ಗೆ ಹೊರಟ ಬಹುಭಾಷಾ ನಟ ಕಿಶೋರ್

ಕನ್ನಡದ ಖ್ಯಾತ ನಟ ಕಿಶೋರ್ ಬಹುಭಾಷಾ ನಟನಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಅಮೋಘ ಅಭಿನಯದ ಮೂಲಕವೇ ಪರಭಾಷೆಯಲ್ಲೂ ಸದ್ದು ಮಾಡುತ್ತಿರುವ ಕಿಶೋರ್ ಇದೀಗ ವಿಭಿನ್ನ ಪಾತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದಾರೆ. ಪ್ರಸ್ತುತ ಕಿಶೋರ್ ಉತ್ತರ ಪ್ರದೇಶದ ಲಖನೌದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಕನ್ನಡ, ತೆಲುಗು,ತಮಿಳು,ಮಲಯಾಳಂ ಭಾಷೆಯಲ್ಲಿ ನಟಿಸಿರುವ ಕಿಶೋರ್ ಇದೀಗ ಬಾಲಿವುಡ್ ಗೂ ಎಂಟ್ರಿಕೊಟ್ಟಿದ್ದಾರೆ. ರಥಾವರ ಸಿನಿಮಾದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಮಾಡುತ್ತಿರುವ ರೆಡ್ ಕಾಲರ್ ಸಿನಿಮಾದ ಮೂಲಕ ನಟಿ ಕಿಶೋರ್ ಪೂರ್ಣ ಪ್ರಮಾಣದ ನಾಯಕನಾಗಿ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಡ್ತಿದ್ದಾರೆ. ಸಂಗೀತ ಸಂಯೋಜಕ ಧರ್ಮೇಂದ್ರ (ಧರ್ಮ ವಿಶ್) ಬರೆದ ಕಥೆಗೆ ಚಂದ್ರಶೇಖರ್ ಬಂಡಿಯಪ್ಪ ಆಕ್ಷನ್ ಕಟ್ ಹೇಳ್ತಿದ್ದಾರೆ. ರಥಾವರ ಚಿತ್ರಕ್ಕೆ ಸಂಗೀತ ನೀಡಿದ್ದ ಧರ್ಮ ವಿಶ್ ಈ ಹಿಂದೆ  ಎ ಆರ್ ರೆಹಮಾನ್‌ ಜೊತೆ ಕೆಲಸ ಮಾಡಿದ್ದಾರೆ. ರೆಡ್ ಕಾಲರ್ ಒಂದು ಸಾಮೂಹಿಕ ಪ್ರಯತ್ನವಾಗಿದ್ದು, ಇಲ್ಲಿ ಸ್ನೇಹಿತರು ನಿರ್ಮಾಪಕರಾಗಿ ಒಗ್ಗೂಡಿದ್ದಾರೆ. ತಂಡದ ಬಹುಪಾಲು ಪಾತ್ರದಲ್ಲಿ ಬೆಂಗಳೂರಿನ ಜನರೇ ಇದ್ದಾರೆ ಜೊತೆಗೆ ದೇಶದ ಇತರ ಭಾಗಗಳಿಂದ ಬರುವ ಕಲಾವಿದರೂ ರೆಡ್ ಕಾಲರ್ ನ ಭಾಗವಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now