• March 14, 2026

ಕಜ್ಬ ಬಳಿಕ ಆರ್ ಚಂದ್ರುಗೆ ಸಖತ್ ಡಿಮ್ಯಾಂಡ್: ಪರಭಾಷೆಯಿಂದಲೂ ಬರ್ತಿದೆ ಆಫರ್

ಉಪೇಂದ್ರ ನಟನೆಯ ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಅತ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಬರ್ತಡೇಗೆ ಕಬ್ಜ ಟೀಸರ್ ರಿಲೀಸ್ ಆಗಿದ್ದು ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಕಬ್ಜ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ವಿದೇಶದಲ್ಲೂ ಕಬ್ಜ ಟೀಸರ್ ಬಗ್ಗೆ ಮಾತು ಕತೆ ಶುರುವಾಗಿದ್ದು ಟೀಸರ್ ರಿಯಾಕ್ಷನ್ ನೋಡಿ ಇಡೀ ಕಬ್ಜ ತಂಡ ಸಖತ್ ಖುಷಿಯಾಗಿದೆ. ಒಳ್ಳೆಯ ವಿಷಯವು ನಮಗೆ ಉತ್ತಮ ಫಲಿತಾಂಶಗಳನ್ನು ತರಬಹುದು. ಕಬ್ಜ ಸಿನಿಮಾವನ್ನು ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಮಾಡುವ ನಮ್ಮ ಗುರಿಯು ಮೊದಲ ಟೀಸರ್‌ನಲ್ಲಿ ಯಶಸ್ವಿಯಾಗಿದೆ. ಎಲ್ಲಾ ಭಾಷೆಗಳಿಂದಲೂ ಜನರು ಟೀಸರ್ ವೀಕ್ಷಿಸಿದ್ದು ಶೀಘ್ರದಲ್ಲೇ 30 ಮಿಲಿಯನ್ ವೀಕ್ಷಣೆಗಳನ್ನು ತಲುಪುತ್ತೇವೆ” ಎಂದು ನಿರ್ದೇಶಕ ಆರ್.ಚಂದರು ಹರ್ಷ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ಸಿನಿಮಾಗೆ ಕಬ್ಜ ಸಿನಿಮಾವನ್ನು ಹೋಲಿಕೆ ಮಾಡಿ ಮಾತನಾಡುತ್ತಿದೆ. ಇದು ಚಿತ್ರತಂಡಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದ್ದು ಟೀಸರ್ ನಲ್ಲಿ ಚಿತ್ರತಂಡ ಗೆಲವು ಸಂಭ್ರಮಿಸುತ್ತಿದೆ. ಕಬ್ಜ ಹಾಲಿವುಡ್ ಗುಣ ಮಟ್ಟದಲ್ಲಿ ತಯಾರಾದ ಸಿನಿಮಾವಾಗಿದ್ದು ರಿಲೀಸ್ ಆದ ಬಳಿಕ ತನ್ನದೇ ಆದ ಹೆಗ್ಗುರುತು ಸೃಷ್ಟಿಸಲಿದೆ ಎನ್ನಲಾಗುತ್ತಿದೆ. ಟೀಸರ್ ಮೂಲಕ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಬ್ಜಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ತೆಲುಗು ಹಾಗೂ ತಮಿಳು ಡಿಸ್ಟ್ರಿಬ್ಯೂಟರ್ ಗಳು ಕಜ್ಬ ಡಿಸ್ಟ್ರಿಬ್ಯೂಷನ್ ಹಕ್ಕಿಗಾಗಿ ಮುಗಿಬಿದಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕಬ್ಜ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಚಿತ್ರವು ಸಾಕಷ್ಟು ವಿಎಫ್‌ಎಕ್ಸ್ ಕೆಲಸಗಳನ್ನು ಹೊಂದಿದೆ, 7 ಭಾಷೆಗಳಲ್ಲಿ ಡಬ್ ಮಾಡಬೇಕಾಗಿದೆ. ಸದ್ಯ ನಿರ್ದೇಶಕ ಚಂದ್ರು ಉಪೇಂದ್ರ ಜೊತೆಗೆ ಸಿನಿಮದ ಪ್ರಚಾರಕ್ಕಾಗಿ ದುಬೈಗೆ ಹೋಗುತ್ತಿರುವ.ಕಬ್ಜ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿರೋದ್ರಿಂದ ಬಿಡುಗಡೆಯ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ ಕಬ್ಜ ಟೀಸರ್ ರಿಲೀಸ್ ಆಗುತ್ತಿದ್ದಂತೆ ಆರ್ ಚಂದ್ರುಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಚಂದ್ರು ಜೊತೆ ಸಿನಿಮಾ ಮಾಡ್ಬೇಕು ಅಂತ ಪರಭಾಷೆಯ ಸ್ಟಾರ್ಸ್ ನಿರ್ಧರಿಸಿದ್ದಾರಂತೆ.ಜೊತೆಗೆ ಟೀಸರ್ ನೋಡಿ ಮೆಚ್ಚಿಕೊಂಡು ಚಂದ್ರುಗೆ ಕರೆ ಮಾಡಿ ಶುಭ ಹಾರೈಸಿದ್ದಾರೆ. ಜೊತೆಗೆ ತಮಿಳಿನ ಸೂಪರ್ ಸ್ಟಾರ್ ಒಬ್ಬರು ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ ಅಂತ ಆಫರ್ ನೀಡಿದ್ದಾರಂತೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now