• June 3, 2026

ಗಂಧದ ಗುಡಿ ರಿಲೀಸ್ ಗೆ ತಿಂಗಳು ಇರುವಾಗ್ಲೆ ಶುರುವಾಯ್ತು ಸಂಭ್ರಮ: ಮುಖ್ಯ ಚಿತ್ರಮಂದಿರದ ಎದುರು ಮೂರು ಬೃಹತ್ ಕಟೌಟ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಸಿನಿಮಾ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ. ಕೊನೆಯ ಭಾರಿ ಅಪ್ಪು ಅವರನ್ನು ಬೆಳ್ಳಿ ಪರದೆ ಮೇಲೆ ಕಣ್ಮುಂಬಿಕೊಳ್ಳಲು ಉತ್ಸುಕರಾಗಿರುವ ಫ್ಯಾನ್ಸ್ ಅದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಸಿನಿಮಾ ಬಿಡುಗಡೆಗೆ ತಿಂಗಳು ಇರುವಾಗ್ಲೆ ಅಭಿಮಾನಿಗಳು ಸಂಭ್ರಮಾಚರಣೆ ಶುರುಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಹಾಗೂ ಅಮೋಘ ವರ್ಷ ಕರ್ನಾಟಕದ ಕಾಡು ಮೇಡುಗಳನ್ನು ಅಲೆದು ಗಂಧದ ಗುಡಿ ಹೆಸರಿನಲ್ಲಿ ಕರ್ನಾಟಕದ ವನ್ಯ ಸಂಪತ್ತಿನ ಕುರಿತಾಗಿ ಡಾಕ್ಯೂಮೆಂಟರಿ ರೆಡಿಮಾಡಿದ್ದಾರೆ. ಈ ಡಾಕ್ಯೂಮೆಂಟರಿ ಬಗ್ಗೆ ವಿಶೇಷ ಒಲವು ಹೊಂದಿದ್ದ ಅಪ್ಪು ಟ್ರೈಲರ್ ರಿಲೀಸ್ ಗೂ ಮೊದಲೇ ಇಹಲೋಕ ತ್ಯಜಿಸಿದ್ದರು. ಪುನೀತ್ ಕನಸಿನ ಕೂಸಿಗೆ ಮತ್ತಷ್ಟು ಜೀವ ತುಂಬಲು ಅಭಿಮಾನಿಗಳು ಮುಂದಾಗಿದ್ದಾರೆ. ಆಕ್ಟೋಬರ್ 28ರಂದು ಗಂಧದ ಗುಡಿ ಡಾಕ್ಯೂಮೆಂಟರಿ ರಿಲೀಸ್ ಆಗ್ತಿದೆ. ಡಾಕ್ಯೂಮೆಂಟರಿ ರಿಲೀಸ್ ಗೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ದಿನಗಳ ಭಾಕಿ ಇದೆ. ಅಷ್ಟರಲ್ಲಾಗಲೆ ಅಭಿಮಾನಿಗಳ ಸಂಭ್ರಮ ಜೋರಗಿದೆ.. ಈಗಾಗ್ಲೆಅಭಿಮಾನಿಗಳು ಅಪ್ಪು ಪೋಸ್ಟರ್ ಮಂಗಳಾರತಿ ಹಾಗೂ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಇದೀಗ ಅಪ್ಪು ಫ್ಯಾನ್ಸ್ ಮತ್ತೊಂದು ನಿರ್ಧಾರಕ್ಕೆ ಬಂದಿದ್ದಾರೆ. ಗಂಧದ ಗುಡಿ ಸಿನಿಮಾ ಬಿಡುಗಡೆ ಆಗಲಿರುವ ಪ್ರಮುಖ ಚಿತ್ರಮಂದಿರದ ಎದುರು ಡಾ.ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್ ಹಾಗೂ ಡಾ.ಪುನೀತ್ ರಾಜ್ ಕುಮಾರ್ ರ ಕಟೌಟ್ ನಿಲ್ಲಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಮೂವರು ಕೂಡ ಗಂಧದ ಗುಡಿ ಹೆಸರಿನಲ್ಲಿ ಸಿನಿಮಾ ಮಾಡಿರುವುದು ವಿಶೇಷ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now