• January 1, 2026

ಆರೋಗ್ಯ ಚೇತರಿಕೆಗೆ ಹೋರಾಡಿದ ನನ್ನ ಗಂಡ ನಿಜವಾದ ಹೋರಾಟಗಾರ: ರಾಜು ಶ್ರೀವಾತ್ಸವ್ ಪತ್ನಿ ಶಿಖಾ

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಿವುಡ್ ಖ್ಯಾತ ಕಾಮಿಡಿ ನಟ ರಾಜು ಶ್ರೀವತ್ಸವ್ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ವೈದ್ಯರು ರಾಜು ಅವರ ಆರೋಗ್ಯ ಚೇತರಿಕೆಗೆ ಸಾಕಷ್ಟು ಶ್ರಮ ಹಾಕಿದ್ದರು. ಆದರೆ ಏಕಾಏಕಿ ರಾಜು ಅವರಿಗೆ ಜ್ವರ ಕಾಣಿಸಿಕೊಂಡು ಕೊನೆಯುಸಿರೆಳೆದಿದ್ದಾರೆ. ಪತಿಯ ನಿಧನದ ಬಳಿಕ ಮಾಧ್ಯಮಗಳೊಂದಿ ಮಾತನಾಡಿದ ರಾಜು ಶ್ರೀವಾತ್ಸವ್ ಪತ್ನಿ ಶಿಖಾ, ಕೊನೆಯ ದಿನಗಳಲ್ಲಿ ಆರೋಗ್ಯ ಸುಧಾರಿಸಲು ಸಾಕಷ್ಟು ಹೋರಾಡಿದ್ದರು. 41 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಆಸ್ಪತ್ರೆಯಿಂದ ಹೊರ ಬರಲಿ ಎಂದು ನಿತ್ಯವೂ ದೇವರಲ್ಲಿ ಪ್ರಾರ್ಥಿಸಿದ್ದೆವು. ಆದರೆ ನಮ್ಮ ಪ್ರಾರ್ಥನೆ ಫಲಿಸಲಿಲ್ಲ. ತನ್ನ ಆರೋಗ್ಯದ ಚೇತರಿಕೆಗೆ ಹೋರಾಡಿದ ನನ್ನ ಪತಿ ನಿಜವಾದ ಹೋರಾಟಗಾರ ಎಂದು ಕಣ್ಣೀರು ಹಾಕಿದರು. ಆಗಸ್ಟ್ 10ರಂದು ರಾಜು ಶ್ರೀವತ್ಸವ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ದಿನದಿಂದಲೂ ರಾಜು ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಶ್ರಮ ಹಾಕಿದ್ದರು. ಆದರೆ ಅವರು ಕೋಮದಿಂದ ಹೊರ ಬರಲೇ ಇಲ್ಲ. ವೈದ್ಯರು ತಮ್ಮೆಲ್ಲ ಪ್ರಯತ್ನಗಳನ್ನು ಮಾಡಿದರೂ, ರಾಜು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ವೈದ್ಯರು ಹೇಳಿದ್ದರು. ಸಾಕಷ್ಟು ವರ್ಷಗಳಿಂದ ಹಾಸ್ಯನಟರಾಗಿ ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದ ರಾಜು ಶ್ರೀವತ್ಸವ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅಲ್ಲದೆ ರಾಜು ಅವರು ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೇಂಜ್’ ಹಾಸ್ಯ ಕಾರ್ಯಕ್ರಮದ ಮೂಲಕ ಸಾಕಷ್ಟು ಜನಪ್ರಿಯತೆ ಘಳಿಸಿದ್ದರು. ಇತ್ತೀಚೆಗೆ ರಾಜು ಶ್ರೀವತ್ಸವ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ರಾಜು ಶ್ರೀವತ್ಸವ್ ಭಾರತೀಯ ಜನತ ಪಾರ್ಟಿಯ ಸದಸ್ಯನಾಗಿದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ರಾಜು ಶ್ರೀವಾತ್ಸವ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ರಾಜು ಶ್ರೀವಾತ್ಸವ್ ರಂತಹ ಅದ್ಭುತ ವ್ಯಕ್ತಿ ಇಷ್ಟು ಬೇಗ ನಮ್ಮನ್ನಗಲಿದ್ದಾರೆ. ಆದರೆ ಅಪಾರ ಜನರ ಮನಸ್ಸಿನಲ್ಲಿ ಅಮರರಾಗಿದ್ದಾರೆ. ಅವರ ಸೇವೆಗಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ. ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್ ನಿಧನದಿಂದ ತೀವ್ರ ದುಂಖಿತನಾಗಿದ್ದೇನೆ. ರಾಜು ಶ್ರೀವಾತ್ಸವ್ ಪ್ರಬುದ್ಧ ಕಲಾವಿದರಲ್ಲದೆ, ಉತ್ಸಾಹ ಭರಿತ ವ್ಯಕ್ತಿಯಾಗಿದ್ದರು. ಸಾಮಾಜಿಕ ಕ್ಷೇತ್ರದಲ್ಲೂ ತುಂಬಾ ಕ್ರಿಯಾಶೀಲರಾಗಿದ್ದರು. ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now