• March 15, 2026

ಕನಕಪುರ ರಸ್ತೆಯ ರೆಸಾರ್ಟ್ ಬಂಧನದಲ್ಲಿ ಬಿಗ್ ಬಾಸ್ ಓಟಿಟಿ ಫೈನಲಿಸ್ಟ್

ಬಿಗ್ ಬಾಸ್ ಓಟಿಟಿ ಶೋನಲ್ಲಿ ಆಯ್ಕೆಯಾಗಿ ಬಿಗ್ ಬಾಸ್ ಟಿವಿ ಶೋಗೆ ಹೋಗುತ್ತಿರುವ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಇನ್ನೂ ತಮ್ಮ ಮನೆ ತಲುಪಿಲ್ಲ. ಬಿಗ್ ಬಾಸ್ ಓಟಿಟಿ ಶೋನಿಂದ ನೇರವಾಗಿ ಬಿಗ್ ಬಾಸ್ ಟಿವಿ ಶೋಗೆ ಹೋಗಲು ಅವರು ರೆಡಿಯಾಗಿದ್ದಾರೆ. ಹೀಗಾಗಿ ಇವರನ್ನು ಬಿಗ್ ಬಾಸ್ ಅಜ್ಞಾತ ಸ್ಥಳದಲ್ಲಿಟ್ಟಿದೆ. ಇದೇ ಸೆ.24ರಂದು ಬಿಗ್ ಬಾಸ್ ಟಿವಿ ಶೋ ಆರಂಭವಾಗಲಿದ್ದು ಇಲ್ಲಿಗೆ ನೇರವಾಗಿ ಈ ನಾಲ್ವರು ಸ್ಪರ್ಧಿಗಳು ಎಂಟ್ರಿ ನೀಡಲಿದ್ದಾರೆ. ಈ ಮೊದಲ ಈ ನಾಲ್ವರನ್ನು ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ನಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಸ್ಪರ್ಧಿಗಳು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಜೊತೆಗೆ ಯಾರ ಸಂಪರ್ಕಕ್ಕೂ ಸಿಗದೆ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಬೆಂಗಳೂರು ಕನಪುರ ರಸ್ತೆಯ ಪೈಪ್ ಲೈನ್ ರೋಡಿನಲ್ಲಿರುವ ಐಷಾರಾಮಿ ರೆಸಾರ್ಟ್ ನಲ್ಲಿ ಸಾನ್ಯ, ರೂಪೇಶ್, ರಾಕೇಶ್ ಹಾಗೂ ಆರ್ಯವರ್ಧನ್ ಗುರೂಜಿ ಅವರನ್ನು ಇರಿಸಲಾಗಿದೆ. ಅಲ್ಲದೆ ಯಾರನ್ನೂ ಸಂಪರ್ಕಿಸದಂತೆ ತಾಕೀತು ಮಾಡಲಾಗಿದೆ. ರೆಸಾರ್ಟ್ಗೆ ಹೋಗುವ ದಾರಿಯಲ್ಲಿ ಕಾವೇರಿ ನೀರು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಿಗೆ ಹೋಗುವುದು ಅಸಾಧ್ಯ ಎನ್ನುವ ಕಾರಣಕ್ಕಾಗಿ ಆ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಇತ್ತೀಚೆಗೆ ಸಾನ್ಯ ಐಯ್ಯರ್ ಇದೇ ರೆಸಾರ್ಟ್ ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದರು. ಮನೆಯವರಿಗೆ ರೆಸಾರ್ಟ್ ಎಂಟ್ರಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ರಾಕೇಶ್,ರೂಪೇಶ್, ಆರ್ಯವರ್ಧನ್ ಸಮ್ಮುಖದಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.    

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now