• June 4, 2026

ಮಧ್ಯರಾತ್ರಿ 3.30ರವರೆಗೂ ಸೈಮಾ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಸ್ಟಾರ್ಸ್: FIR ದಾಖಲು

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೈಮಾ 2022 ಕಾರ್ಯಕ್ರಮ ಸಾಕಷ್ಟು ಅದ್ದೂರಿಯಾಗಿ ನಡೆಯಿತು. ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಾಕಷ್ಟು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ಪಾರ್ಟಿ ಮಾಡಿದ ಸಾಕಷ್ಟು ಸೆಲೆಬ್ರಿಟಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಸಿನಿಮಾ ರಂಗದ ಅನೇಕ ದಿಗ್ಗಜರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಬಳಿಕ ಔತಣ ಕೂಟ ಏರ್ಪಡಿಸಲಾಗಿತ್ತು. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಲಕ್ಷ್ಯುರಿ ಹೋಟೆಲ್ ನಲ್ಲಿ ಪಾರ್ಟಿ ಏರ್ಪಡಿಸಲಾಗಿತ್ತು. ಸುಮಾರು 12ಗಂಟೆ ವೇಳೆಗೆ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು 1 ಗಂಟೆಗೆ ಪಾರ್ಟಿ ಮುಗಿಸುವಂತೆ ಹೇಳಿದ್ದರು. ಆದರೆ ಅದನ್ನು ಪಾಲಿಸದೆ ಬೆಳಗಿನ ಜಾವ 3.30ರ ವರೆಗೂ ಪಾರ್ಟಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವಧಿ ಮೀರಿ ಮಧ್ಯರಾತ್ರಿವರೆಗೂ ಪಾರ್ಟಿ ಮಾಡಲು ಅವಕಾಶ ಕೊಟ್ಟ ಹೋಟೆಲ್ ಮೇಲೆ ಈ ದೂರು ದಾಖಲಾಗಿದ್ದು, ಹೋಟೆಲ್‌ನ ಮ್ಯಾನೇಜರ್ ಮತ್ತು ಪಾರ್ಟಿ ಆಯೋಜಕರ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಮೊದಲು ಹನ್ನೆರಡು ಗಂಟೆಗೆ ಹೋಗಿ ಪರಿಶೀಲನೆ ಮಾಡಿದ್ದೇನೆ. ಒಂದು ಗಂಟೆಗೆ ಪಾರ್ಟಿ ಮುಗಿಸಿ ಎಂದೂ ಹೇಳಿದ್ದಾನೆ. ಆದರೆ, ಆಯೋಜಕರು ಮಧ್ಯರಾತ್ರಿ 3.30ರವರೆಗೂ ಪಾರ್ಟಿ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಚೈತನ್ಯಾ ದೂರು ದಾಖಲಿಸಿದ್ದಾರೆ. ಇದೇ ಮೊದಲ ಭಾರಿಗೆ ಬೆಂಗಳೂರಿನಲ್ಲಿ ಸೈಮಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಾಕಷ್ಟು ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ನಂತರದ ಪಾರ್ಟಿಯಲ್ಲಿ ನಿಯಮ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಇದೀಗ ಕಾನೂನಿನ ಸಮಸ್ಯೆ ಎದುರಾಗಿದೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now