• January 1, 2026

‘ಸೀತಾ ರಾಮಂ’ ಸೂಪರ್ ಹಿಟ್ ಆದ್ಮೇಲೆ ಹೆಚ್ಚಾಯ್ತು ಡಿಮ್ಯಾಂಡ್: ಚಿತ್ರವೊಂದಕ್ಕೆ ಮೃಣಾಲ್ ಠಾಕೂರ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

ಹಿಂದಿ ಸಿರಿಯಲ್ ಮೂಲಕ ಬಣ್ಣದ ಜರ್ನಿ ಆರಂಭಿಸಿದ ನಟಿ ಮೃಣಾಲ್ ಠಾಕೂರ್ ಸದ್ಯ ಸಖತ್ ಭೇಡಿಕೆಯ ನಟಿಯಾಗಿ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ದುಲ್ಕರ್ ಸಲ್ಮಾನ್ ನಟನೆಯ ಸೀತಾ ರಾಮಂ ಸಿನಿಮಾದಲ್ಲಿ ಕಾಣಿಸಿಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಮೃಣಾಲ್ ಪ್ಯಾನ್ ಇಂಡಿಯಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರ ಸಂಭಾವನೆಯೂ ಹೆಚ್ಚಾಗಿದೆ. ಸಾಕಷ್ಟು ವರ್ಷಗಳಿಂದ ಬಣ್ಣದ ಲೋಕದಲ್ಲಿದ್ದರು ಮೃಣಾಲ್ ಗೆ ಬ್ರೇಕ್ ನೀಡಿದ್ದು ಸೀತಾ ರಾಮ ಸಿನಿಮಾ. ಚಿತ್ರದಲ್ಲಿ ಮೃಣಾಲ್ ಎರಡು ಶೇಡ್ ಗಳಿರುವ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದಿದ್ದರು. ಸದ್ಯ ಮೃಣಾಲ್ ಗೆ ಸಾಕಷ್ಟು ಆಫರ್ ಗಳು ಬರ್ತಿದ್ದು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಣ್ಣದ ಜರ್ನಿ ಆರಂಭಿಸಿದಾಗ ಮೃಣಾಲ್ 5- 10 ಲಕ್ಷ ರೂಪಾಯಿ ಪಡೆಯುತ್ತಿದ್ದರು. ಆದರೆ ಇದೀಗ ಬಾಲಿವುಡ್‌ನಲ್ಲಿ ಮೃಣಾಲ್ ಸಂಭಾವನೆ 2 ಕೋಟಿ ಮುಟ್ಟಿದ್ರೆ, ದಕ್ಷಿಣ ಭಾರತದಲ್ಲಿ ಒಂದು ಕೋಟಿ ಎನ್ನಲಾಗಿದೆ. ಸೀತಾ ರಾಮಂ ಒಂದು ಸಿನಿಮಾ ಹಿಟ್‌ನಿಂದ ಮೃಣಾಲ್‌ ಇಷ್ಟೊಂದು ಹೈಕ್ ಮಾಡಿಕೊಂಡಿರುವುದು ನೆಟ್ಟಿಗರಿಗೆ ಶಾಕ್ ಆಗಿದೆ. ಇದರ ಜೊತೆ ದುಲ್ಕರ್‌ ಜೊತೆ ಮತ್ತೊಂದು ತಮಿಳು ಸಿನಿಮಾದಲ್ಲಿ ನಟಿಸಲು ಮೃಣಾಲ್ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಗ್ಲಾಮರ್ ಜೊತೆಗೆ ತಮಗೆ ಸಿಕ್ಕ ಪಾತ್ರಕ್ಕೆ ಮೃಣಾಲ್ನ್ಯಾಯ ಒದಗಿಸುತ್ತಾರೆ. ಹೀಗಾಗಿ ಆಕೆ ಕೇಳಿದಷ್ಟು ಸಂಭಾವನೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಿರ್ಮಾಪಕರು ಚರ್ಚೆ ನಡೆಸಿದ್ದಾರೆ. ‘ಸೀತಾ ರಾಮಂ ಸಿನಿಮಾದಲ್ಲಿ ಸೀತಾ ಪಾತ್ರವು ನನ್ನ ಜೀವನ ಅತ್ಯಂತ ವಿಶಿಷ್ಠ ಅನುಭವಗಳಲ್ಲಿ ಒಂದು. ಸಿನಿಮಾ ಕಥೆ ಕೇಳಿದ ಕೆಲವೇ ನಿಮಿಷಗಳಲ್ಲಿ ಬ್ಲ್ಯಾಂಕ್ ಆಗಿಬಿಟ್ಟೆ. ಯಾವ ಕಾರಣಕ್ಕೂ ಈ ಸಿನಿಮಾ ಬಿಡಬಾರದು ಎಂದು ನಿರ್ಧಾರ ಮಾಡಿಕೊಂಡೆ. ದಕ್ಷಿಣ ಭಾರತದಲ್ಲಿ ನನ್ನ ಮೊದಲ ಸಿನಿಮಾ ಇದಾಗಿರುವ ಕಾರಣ ನಿರೀಕ್ಷೆ ಜೊತೆಗೆ ಭಯವಿತ್ತು ಆದರೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ’ ಎಂದು ಮೃಣಾಲ್ ಮಾತನಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now