• June 2, 2026

‘ಥ್ಯಾಂಕ್ ಯೂ’ ಬಳಿಕ ಮತ್ತೊಂದು ಸಿನಿಮಾದಲ್ಲಿ ನಾಗಚೈತನ್ಯ ನಟನೆ: ಇಂದಿನಿಂದಲೇ ಶುರು ಶೂಟಿಂಗ್

ಸಾಕಷ್ಟು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ ಹಾಗೂ ಸಮಂತಾ ಮದುವೆಯಾದ ಕೆಲವೇ ಕೆಲವು ವರ್ಷಗಳಲ್ಲಿ ಬೇರೆ ಬೇರೆಯಾಗಿದ್ದರು. ಇವರಿಬ್ಬರ ಡಿವೋರ್ಸ್ ಗೆ ಕಾರಣ ಏನು ಎಬ್ಬಂದು ಇನ್ನೂ ನಿಗೂಡವಾಗಿಯೇ ಉಳಿದಿದೆ. ಡಿವೋರ್ಸ್ ಬಳಿಕ ಸಮಂತಾ ಒಂದರ ಹಿಂದೊಂದರಂತೆ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದರೆ ಇತ್ತ ನಾಗಚೈತನ್ಯ ನಟನೆಯ ಸಿನಿಮಾಗಳು ಬಾಕ್ಸ್ ಅಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಥ್ಯಾಂಕ್ ಯೂ ಸಿನಿಮಾದ ಬಳಿಕ ನಾಗಚೈತನ್ಯ ಸಿನಿ ಕರಿಯರ್ ಬಗ್ಗೆ ಆತಂಕ ಎದುರಾಗಿತ್ತು. ಥ್ಯಾಂಕ್ ಯೂ ಚಿತ್ರಕ್ಕೂ ಮೊದಲು ನಾಗಚೈತನ್ಯ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಂಡಿದ್ದವು. ಲವ್ ಸ್ಟೋರಿ ಹಾಗೂ ಬಂಗಾರರಾಜು ಚಿತ್ರಗಳು ಹಿಟ್ ಲಿಸ್ಟ್ ಸೇರಿದ್ದವು. ಹೀಗಾಗಿ ಸಹಜವಾಗಿಯೇ ಥ್ಯಾಂಕ್ ಯೂ ಚಿತ್ರದ ಮೇಲೆ ನಿರೀಕ್ಷೆ ಇತ್ತು. ಆದರೆ ಥಿಯೇಟರ್ ಗೆ ಎಂಟ್ರಿಕೊಟ್ಟ ಥ್ಯಾಕ್ಯೂ ಪ್ರೇಕ್ಷಕರ ಮನಸ್ಸು ಗೆಲ್ಲಲಿಲ್ಲ. ಥ್ಯಾಂಕ್ ಯೂ ಸಿನಿಮಾ ಸೋಲಿನ ಬಳಿಕ ನಾಗಚೈತನ್ಯ ಸಿನಿ ಕರಿಯರ್ ಬಗ್ಗೆ ಕಂಗಾಲಾಗಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಾಗ ಚೈತನ್ಯ ನಟನೆಯ ಹೊಸ ಸಿನಿಮಾ ಆರಂಭ ಆಗಿದ್ದು ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿಯಲ್ಲಿ ಚಿತ್ತೂರಿ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ನಾಗಚೈತನ್ಯ ನಟನೆಯ 22ನೇ ಚಿತ್ರವಾಗಿದ್ದು ಸದ್ಯಕ್ಕೆ NC 22 ಎಂದು ಕರೆಯಲಾಗುತ್ತಿದೆ. ಇಂದಿನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು ನಾಗಚೈತನ್ಯಗೆ ಜೋಡಿಯಾಗಿ ನಟಿ ಕೃತಿ ಶೆಟ್ಟಿ ಕಾಣಿಸಿಕೊಳ್ತಿದ್ದಾರೆ. ಇಂದು ಅಕ್ಕಿನೇನಿ ನಾಗೇಶ್ವರ್ ರಾವ್ ಹುಟ್ಟುಹಬ್ಬವಾಗಿದ್ದು ಇದೇ ಕಾರಣಕ್ಕೆ ಇಂದಿನಿಂದಲೇ ಚಿತ್ರತಂಡ ಶೂಟಿಂಗ್ ಆರಂಭಿಸಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now