• March 15, 2026

ಮಗುವಿಗೆ ವಾಯು ಎಂದು ಹೆಸರಿಟ್ಟ ಸೋನಂ ಕಪೂರ್: ಮಗನ ಹೆಸರಿನ ಅರ್ಥ ತಿಳಿಸಿದ ನಟಿ

ಸೆಲೆಬ್ರಿಟಿಗಳಿಗೆ ಮಗು ಹುಟ್ಟಿದಾಗ ಮಗುವಿಗೆ ಯಾವ ಹೆಸರು ಇಡ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಇರುತ್ತೆ. ಜೊತೆಗೆ ಅಭಿಮಾನಿಗಳು ಕೂಡ ಸಾಕಷ್ಟು ಹೆಸರುಗಳನ್ನೂ ಸೂಚಿಸಿರುತ್ತಾರೆ. ಮಗುವಿಗೆ ಹೆಸರಿಡುವ ಬಗ್ಗೆಯೇ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗುತ್ತೆ. ಸದ್ಯ ಬಾಲಿವುಡ್ ನಟಿ ಸೋನಂ ಕಪೂರ್ ತಮ್ಮ ಮಗನಿಗೆ ವಾಯು ಕಪೂರ್ ಅಹೂಜ ಎಂದು ಹೆಸರಿಟ್ಟಿದ್ದು ಆದರ ಅರ್ಥವನ್ನು ತಿಳಿಸಿದ್ದಾರೆ. ಮಕ್ಕಳಿಗೆ ವಿಭಿನ್ನವಾಗಿ ಹೆಸರಿಡಬೇಕು ಅನ್ನೋದು ಪೋಷಕರ ಆಸೆಯಾಗಿರುತ್ತೆ. ಅದರಲ್ಲೂ ಸೆಲೆಬ್ರಿಟಿಗಳು ಮಕ್ಕಳಿಗೆ ಹೆಸರಿಡುವಾಗ ದೊಡ್ಟ ಮಟ್ಟದಲ್ಲಿ ಚರ್ಚೆಯೇ ನಡೆದು ಬಿಡುತೆ.  ಇದೀಗ ನಟಿ ಸೋನು ಕಪೂರ್ ಹಾಗೂ ಆನಂದ್ ಅಹುಜಾ ತಮ್ಮ ಮಗನಿಗೆ ವಾಯು ಕಪೂರ್ ಅಹೂಜ ಎಂದ ನಾಮಕರಣ ಮಾಡಿದ್ದಾರೆ. ಮಗುವನ್ನ ಕೈಯಲ್ಲಿ ಹಿಡಿದುಕೊಂಡಿರೋ ಆನಂದ್ ಪತ್ನಿ ಸೋನಂಗೆ ಮುತ್ತು ನೀಡುತ್ತಿದ್ದಾರೆ. ಈ ವೇಳೆ ಸೋನಂ ಮಗುವಿನ ಮುಖವನ್ನೇ ನೋಡುತ್ತಿದ್ದಾರೆ. ಈ ವೇಳೆ ಮೂವರು ಕೂಡ ಹಳದಿ ಬಣ್ಣದ ಬಟ್ಟೆ ಧರಿಸಿದ್ದು ಅಭಿಮಾನಿಗಳು ಈ ಫೋಟೋಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ನಮ್ಮ ಮಗನಿಗೆ ವಾಯು ಕಪೂರ್ ಅಹೂಜ ಎಂದು ಹೆಸರು ಇಟ್ಟಿದ್ದೇವೆ. ಹಿಂದೂ ಧರ್ಮಗ್ರಂಥದ ಪ್ರಕಾರ ವಾಯುವು ಪಂಚ ಭೂತಗಳಲ್ಲಿ ಒಂದು. ವಾಯುವು ಉಸಿರಾಟದ ದೇವತೆ, ಹನುಮಂತನ ತಂದೆ ವಾಯು’ ಎಂದು ಸೋನಂ ಕಪೂರ್ ಬರೆದುಕೊಂಡಿದ್ದಾರೆ. 2007ರಲ್ಲಿ ತೆರೆಕಂಡ ಸಾವರಿಯಾ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿಕೊಟ್ಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಸುಮಾರು 20 ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆದರೆ ಆಕೆಗೆ ಹೇಳಿಕೊಳ್ಳುವಂತ ಬ್ರೇಕ್ ಸಿಗಲಿಲ್ಲ. ಹೀಗಾಗಿ 2018ರಲ್ಲಿ ಉದ್ಯಮಿ ಆನಂದ್ ಕಪೂರ್ ಕೈ ಹಿಡಿದಿದ್ದು ಇದೀಗ ಮುದ್ದು ಮಗುವಿನ ತಾಯಿಯಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now