• March 16, 2026

ಶಿವಾಜಿ ನಗರದ ಮಿಲಿಟರಿ ಹೋಟೆಲ್ ನಲ್ಲಿ ಕಾಣಿಸಿಕೊಂಡ ನಟ ಆಶಿಷ್ ವಿದ್ಯಾರ್ಥಿ

ವಿಲನ್ ಪಾತ್ರದಲ್ಲಿ ನಟಿಸಿ ಸಿನಿಮಾ ರಂಗದಲ್ಲಿ ಸಖತ್ ಖ್ಯಾತಿ ಘಳಿಸಿರುವ ಆಶಿಷ್ ವಿದ್ಯಾರ್ಥಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.2017ರಲ್ಲಿ ತೆರೆಕಂಡ ಮಾರ್ಚ್ 22 ಸಿನಿಮಾದ ಬಳಿಕ ಆಶಿಷ್ ವಿದ್ಯಾರ್ಥಿ ಸ್ಯಾಂಡಲ್ ವುಡ್ ಸಿನಿಮಾಗೆ ಬಣ್ಣ ಹಚ್ಚಿಲ್ಲ. ಆದರೂ ಕನ್ನಡಿಗರು ಮಾತ್ರ ಅವರನ್ನು ಮರೆತಿಲ್ಲ. ಕನ್ನಡ ಸಿನಿಮಾದಲ್ಲಿ ನಟಿಸದೇ ಹೋದರು ಆಶಿಷ್ ವಿದ್ಯಾರ್ಥಿಗೆ ಕರ್ನಾಟಕದ ಮೇಲಿನ ಗೌರವ ಕೊಂಚವು ಕಮ್ಮಿಯಾಗಿಲ್ಲ. ಸಾಕಷ್ಟು ಸಮಯದ ಬಳಿಕ ಆಶಿಷ್ ವಿದ್ಯಾರ್ಥಿ ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದಾರೆ. ಆಶಿಷ್ ವಿದ್ಯಾರ್ಥಿ ಕರ್ನಾಟದಲ್ಲಿ ಕಾಣಿಸಿಕೊಂಡಿರೋದು ಸಿನಿಮಾಗಾಗಿ ಅಲ್ಲ. ಬದಲಾಗಿ ಊಟದ ವಿಚಾರಕ್ಕೆ. ಆಶಿಷ್ ವಿದ್ಯಾರ್ಥಿ ಆಹಾರ ಪ್ರೀಯರಾಗಿದ್ದು, ಇದಕ್ಕಾಗಿಯೇ ಯೂಟ್ಯೂಬ್ ವಾಹಿನಿಯನ್ನು ಸಹ ಮಾಡಿದ್ದಾರೆ.  ತನ್ನಿಷ್ಟದ ಊಟದ ಬಗ್ಗೆ ಆಶಿಷ್ ವಿಲಾಗ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ದೇಶದ ವಿವಿದ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಫೇಮಸ್ ಹೋಟೆಲ್‌ಗೆ ಹೋಗಿ ಊಟ ಸವಿದು ತನ್ನ ಅಭಿಮಾನಿಗಳಿಗೂ ತಿಳಿಸುತ್ತಾರೆ. ಆಶಿಷ್ ವಿದ್ಯಾರ್ಥಿ ಈ ಭಾರಿ ಅವರ ವಿಲಾಗ್ ನಲ್ಲಿ ಬೆಂಗಳೂರಿನ ಶಿವಾಜಿ ನಗರದಲ್ಲಿನ ಒಂದು ಪುಟ್ಟ ಮಿಲಿಟರಿ ಹೋಟೆಲ್‌ ಊಟದ ಬಗ್ಗೆ ವಿವರಿಸಿದ್ದಾರೆ. ಊಟ ಮಾಡುತ್ತಾ ಆ ಹೋಟೆಲ್‌ನ ವಿಶೇಷತೆ ಮತ್ತು ಅಲ್ಲಿನ ಆಹಾರದ ರುಚಿಯನ್ನು ವೀಕ್ಷಕರಿಗೆ ತಿಳಿಸಿದ್ದಾರೆ. ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ಆಹಾರದ ರುಚಿ ಇದೆ ಎಂದಿರುವ ಆಶಿಷ್ ವಿದ್ಯಾರ್ಥಿ, ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ, ಚಿಕನ್ ಕರಿ, ಮಟನ್ ಸುಕ್ಕಾ, ಪಾಯಾ ಸೂಪ್ ಸೇವಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೂ ಒಮ್ಮೆ ಟ್ರೈ ಮಾಡಿ ಎಂದಿದ್ದಾರೆ. ಈ ವಿಡಿಯೋವನ್ನು ಆಶಿಷ್ ಕೂ ನಲ್ಲೂ ಹಂಚಿಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now