ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಂತಾರ ಸಿನಿಮಾದಲ್ಲಿ ಅಪ್ಪು ನಟಿಸಬೇಕಿತ್ತು: ಪುನೀತ್ ಮಾಡಬೇಕಿದ್ದ ಪಾತ್ರ ರಿಷಬ್ ಶೆಟ್ಟಿ ಪಾಲಾಗಿದ್ದು ಹೇಗೆ ಗೊತ್ತಾ?
ಕಾಂತಾರ ಸಿನಿಮಾದ ಬಗ್ಗೆ ‘ಅನೇಕರಿಗೆ ಗೊತ್ತಿರದ ಮಾಹಿತಿ ಏನೆಂದರೆ, ಕಾಂತಾರ ಸಿನಿಮಾದಲ್ಲಿ ಅಪ್ಪು ಸರ್ ಅವರೇ ಹೀರೋ ಆಗಬೇಕಿತ್ತು. ನಾವು ನಿರ್ದಿಷ್ಟ ಕಾಲಮಾನದಲ್ಲಿ ಈ ಸಿನಿಮಾವನ್ನು ಚಿತ್ರಿಸಬೇಕಿತ್ತು. ಅದರಿಂದಾಗಿ ಅವರ ಡೇಟ್ ಕ್ಲ್ಯಾಶ್ ಆಯ್ತು. ಹಾಗಾಗಿ ಸ್ವತಃ ಪುನೀತ್ ಅವರೇ ರಿಷಬ್ ಶೆಟ್ಟಿಯ ಹೆಸರು ಸೂಚಿಸಿದರು’ ಎಂದು ಕಾರ್ತಿಕ್ ಗೌಡ ಇನ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.
ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಪುನೀತ್ ಅವರನ್ನು ನೋಡಿದ್ದ ಅಭಿಮಾನಿಗಳು ಕಾಂತಾರ ಸಿನಿಮಾದಲ್ಲಿ ಡಿಫರೆಂಟ್ ಆಗಿ ನೋಡಬೇಕು ಅಂದುಕೊಂಡಿದ್ದರು.ಆದರೆ ಅದು ಕೈಗೂಡಲೇ ಇಲ್ಲ. ಪುನೀತ್ ಸಲಹೆಯಂತೆ ರಿಷಬ್ ಶೆಟ್ಟಿಯನ್ನು ಕಾಂತಾರ ಸಿನಿಮಾದಲ್ಲಿ ನಾಯಕನಾಗಿ ಹಾಕಿಕೊಂಡಿದ್ದು ಈ ಸಿನಿಮಾಗೆ ರಿಷಬ್ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ ಅನ್ನೋದು ಟ್ರೈಲರ್ ನಲ್ಲಿ ಗೊತ್ತಾಗಿದೆ.
ಸೆಪ್ಟೆಂಬರ್ 30ರಂದು ‘ಕಾಂತಾರ’ ಸಿನಿಮಾ ತೆರೆಗೆ ಆಗಲಿದೆ. ಈಗಾಗಲೇ ಚಿತ್ರದ ‘ಸಿಂಗಾರ ಸಿರಿಯೇ..’ ಹಾಡು ಸೂಪರ್ ಹಿಟ್ ಆಗಿದೆ ಸದ್ಯದಲ್ಲೇ ಮತ್ತೊಂದು ಹಾಡು ಬಿಡುಗಡೆ ಆಗಲಿದೆ.
