• February 10, 2026

ಬಾಲಿವುಡ್ ಸ್ಟಾರ್ ನಟನೊಂದಿಗೆ ಗೂಗ್ಲಿ ಬೆಡಗಿ ಕೃತಿ ಕರಬಂಧ ಮದುವೆ

ಚಿರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ಕೃತಿ ಕರಬಂಧ ಸದ್ಯ ಹಿಂದಿ ಹಾಗೂ ದಕ್ಷಿಣ ಭಾರತದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳಲ್ಲಿ ಸದ್ದು ಮಾಡುತ್ತಿರುವಾಗ್ಲೆ ಕೃತಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಬಾಲಿವುಡ್ ಸ್ಟಾರ್ ನಟನ ಜೊತೆ ಗೂಗ್ಲಿ ಹುಡುಗಿ ಮದುವೆಯಾಗುತ್ತಿದ್ದಾರೆ. ಚಿರಂಜೀವಿ ಸರ್ಜಾ ನಟನೆಯ 2010ರಲ್ಲಿ ತೆರೆಕಂಡ ಚಿರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಕೃತಿ ಕರಬಂಧ ಬಳಿಕ ಪ್ರೇಮ್ ಅಡ್ಡ, ಸೂಪರ್ ರಂಗ, ಸೂಪರ್ ರಂಗ, ಗೂಗ್ಲಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಅದರಲ್ಲೂ ಯಶ್ ಜೊತೆ ಗೂಗ್ಲಿ ಸಿನಿಮಾದಲ್ಲಿ ನಟಿಸಿದ ಕೃತಿ ಕರಬಂಧಗೆ ಈ ಸಿನಿಮಾ ಸಾಕಷ್ಟು ಹೆಸರು ತಂದಕೊಟ್ಟಿತ್ತು. ಇದೀಗ ಮದುವೆಯ ವಿಷಯವಾಗಿ ಕೃತಿ ಸದ್ದು ಮಾಡ್ತಿದ್ದಾರೆ. ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ನಟಿ ಕೃತಿ ಕರಬಂಧ ಕಳೆದ 4 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಕೃತಿ ಮತ್ತು ಪುಲ್ಕಿತ್ ಹಸೆಮಣೆ ಏರಲು ರೆಡಿಯಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದೆ. ಆದರೆ ಈ ಬಗ್ಗೆ ಪುಲ್ಕಿತ್ ಆಗಲಿ ಕೃತಿ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now