ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಖಾಸಗಿ ವಿಡಿಯೋ ಲೀಕ್ ಆದಾಗ ಮನೆಯವರ ರಿಯಾಕ್ಷನ್ ಹೇಗಿತ್ತು? ಸೋನು ಗೌಡ ಬಿಚ್ಚಿಟ್ಟ ನೋವಿನ ಸಂಗತಿ
ಸಾಕಷ್ಟು ವಿರೋಧಗಳ ನಡುವೆ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಸೋನು ಗೌಡ ಒಂದು ವರ್ಗದ ಪ್ರೇಕ್ಷಕರ ಮನ ಗೆಲ್ಲವಲ್ಲಿ ಸಕ್ಸಸ್ ಆಗಿದ್ದರು. ತಮ್ಮ ನೇರಾ ನೇರಾ ಮಾತುಗಳಿಂದ ಮನೆ ಮಂದಿ ಹಾಗೂ ವೀಕ್ಷಕರ ಮನ ಗೆದ್ದಿದ್ದರು. ಇದೀಗ ತಮ್ಮ ಖಾಸಗಿ ವಿಡಿಯೋ ಲೀಕ್ ಆದ ಸಂದರ್ಭದಲ್ಲಿ ಮನೆಯವರ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ಸೋನು ಗೌಡ ಹೇಳಿಕೊಂಡಿದ್ದಾರೆ.
ನಾನು ಎಷ್ಟೇ ಕಷ್ಟ ಬಂದರೂ ಸುಳ್ಳು ಹೇಳುವುದಿಲ್ಲ. ಸತ್ಯ ಒಂದು ಗಂಟೆ ಅಷ್ಟೇ ಕೋಪ ತರಿಸುತ್ತದೆ. ಆದರೆ, ಅದಕ್ಕೆ ಬೆಲೆ ಇದೆ. ಆದರೆ ಸುಳ್ಳು ಆ ರೀತಿ ಅಲ್ಲ. ಒಂದು ಸುಳ್ಳನ್ನು ಮುಚ್ಚಿ ಹಾಕಲು ಸಾವಿರ ಸುಳ್ಳು ಹೇಳಬೇಕಾಗುತ್ತದೆ. ಈ ಕಾರಣಕ್ಕೆ ಮನೆಯಲ್ಲಿ ನಾನು ಎಲ್ಲವನ್ನೂ ಒಪ್ಪಿಕೊಂಡೆ’ ಎಂದು ಸೋನು ಗೌಡ ಹೇಳಿದ್ದಾರೆ.
ವಿಡಿಯೋ ಲೀಕ್ ಆದ ‘ಆ ಸಂದರ್ಭ ನೆನಪಿಸಿಕೊಂಡರೆ ನನಗೆ ಬೇಸರ ಆಗುತ್ತದೆ. ಇಡೀ ಫ್ಯಾಮಿಲಿ 2 ವಾರ ನನ್ನ ಜೊತೆ ಮಾತನಾಡಲಿಲ್ಲ. ಮನೆಯವರು ಮಾತನಾಡಿಸಿದ್ದನ್ನು ಬಿಡಲೂ ಒಂದು ಕಾರಣ ಇದೆ ಎಂಬುದನ್ನು ಅವರು ನನಗೆ ಅರ್ಥ ಮಾಡಿಸಿದರು. ನಮ್ಮ ಮನೆಯಲ್ಲಿ ನನ್ನನ್ನು ಪ್ರತಿಯೊಬ್ಬರು ಅತಿಯಾಗಿ ಪ್ರೀತಿಸುತ್ತಾರೆ’ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.
