ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟನಾಸಕ್ತರಿಗೆ ಕಥಾಕರ್ ವೀರ್ ಸಂಸ್ಥೆಯಿಂದ ಏಳು ದಿನಗಳ ನಟನೆಯ ಕೋರ್ಸ್
ಇವರ ಈ ಸಾಹಸಕ್ಕೆ ಹಿರಿಯ ರಂಗಕರ್ಮಿಗಳು, ನಿರ್ದೇಶಕರು, ನಟರು, ಹಾಗೂ ನಿರ್ಮಾಪಕರಾದ ಬಿ. ಸುರೇಶ, ಮಂಡ್ಯ ರಮೇಶ್, ಸುಚೇಂದ್ರ ಪ್ರಸಾದ್, ರವಿ ಮೂರೂರು, ಮೂಗ್ ಸುರೇಶ್, ಸುಬ್ರಮಣ್ಯ, ರಾಜೇಶ್ ಲತಾರ್, ಯೋಗಶಿಕ್ಷಕಿ ಡಾ. ರಾಜೇಶ್ವರಿ, ಕಥಕ್ ನೃತ್ಯಗಾರ್ತಿ ಆಸ್ತಾ ಗೋಡ್ಬೋಲೆ ಕಾರ್ಲೇಕರ್ ಸೇರಿ ಇನ್ನೂ ಹಲವು ಬೇರೆ ಬೇರೆ ಇಂಡಸ್ಟ್ರಿಯ ಗಣ್ಯರು ಸಾಥ್ ನೀಡಿದ್ದು ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ನಟ ಗಣೇಶ್ ಎಂ ಭೀಮನಕೋಣೆ, ಯಕ್ಷಗಾನ ಕಲಾವಿದೆ ಅರ್ಚನಾ ಸುರೇಶ್ ನಾಯ್ಕ್, ಸುಮಂತ್, ಯೋಗೇಶ್ ನಾಯ್ಕ್ ವೀರ್ ಕಥಾಕರ್ ತಂಡದಲ್ಲಿ ಇರಲಿದ್ದಾರೆ.
ಸುಷ್ಮಾ ವೀರ್ ಅವರ ಸ್ನೇಹಿತರೂ ಆದ ಸೋಹಂ ಗುರೂಜಿ ಅವರೂ ಸಹ ಕೈ ಜೋಡಿಸಿದ್ದಾರೆ. ಆರ್ಟ್ & ಕಲ್ಚರ್ ಫಾರ್ ಲೈಫ್ ಹೆಸರಿನಲ್ಲಿ ಬೆಂಗಳೂರು ಹೊರವಲಯದಲ್ಲಿ ಸೋಹಂ ಆಶ್ರಮದಲ್ಲಿ ಎರಡು ಎಕರೆಯ ವಿಸ್ತಾರವಾದ ಜಾಗದಲ್ಲಿ ಈ ರೆಸಿಡೆನ್ಶಿಯಲ್ ತರಗತಿಗಳು ನಡೆಯಲಿವೆ. ಒಟ್ಟು ಏಳುದಿನದ ತರಬೇತಿ ತರಗತಿಗಳು ಇದಾಗಿದ್ದು, ನಟನೆಯಲ್ಲಿ ಪಕ್ವತೆ ಬರಲು ಹಲವು ಪರಿಣಿತರು ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ನಿತ್ಯ ಏಳು ಗಂಟೆ ನಡೆಯಲಿರುವ ಈ ತರಗತಿಗಳಲ್ಲಿ ಕೇವಲ ನಟನೆ ಮಾತ್ರವಲ್ಲದೆ, ದೈಹಿಕ ಮತ್ತು ಆಂಗಿಕ ಅಭಿನಯ, ಧ್ವನಿ ಏರಿಳಿತ, ಯೋಗ, ಯಕ್ಷಗಾನ, ಕಥಕ್ ರೀತಿಯ ವಿಶೇಷ ಕಲೆಗಳನ್ನೂ ಕಲಿಸಲಾಗುತ್ತದೆ. ಅದಕ್ಕೆಂದೆ, ಪರಿಣಿತರೂ ಇದ್ದಾರೆ.
ಈ ಬಗ್ಗೆ ಸುಷ್ಮಾ ವೀರ್ ಹೇಳುವುದೇನು?
ಮನರಂಜನಾ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಕಲಾವಿದರ ಕೊರತೆ ಕಾಡುತ್ತಿದೆ. ಪಳಗಿದ, ಪಕ್ವವಾದ ಕಲಾವಿದರು ಸಿಗುತ್ತಿಲ್ಲ. ಅದೆಲ್ಲವನ್ನು ಗಮನದಲಿಟ್ಟುಕೊಂಡೇ ಸಮಾನ ಮನಸ್ಕರೇ ಸೇರಿ ಇದನ್ನು ಶುರು ಮಾಡಿದ್ದೇವೆ. ಈ ಕೋರ್ಸ್ ಒಟ್ಟು 7ದಿನ ನಡೆಯಲಿದೆ. ನಿತ್ಯ 7 ಗಂಟೆ, 7 ವಿಷಯಗಳು, 7 ಮೆಂಟರ್ಸ್.. ಇದರ ಜತೆಗೆ ಕಲಿಕೆ ಊಟ ವಸತಿಯನ್ನೂ ಸೋಹಂ ಆಶ್ರಮದಲ್ಲಿಯೇ ಇರಲಿದೆ. ಪರಿಸರ ಪ್ರೀತಿ, ಜೀವನ ಪ್ರೀತಿಯೂ ಆ ಏಳು ದಿನದಲ್ಲಿ ಕಲಿಸಿಕೊಡುವುದು ನಮ್ಮ ಉದ್ದೇಶ ಎಂಬುದು ಸುಷ್ಮಾ ವೀರ್ ಅವರ ಮಾತು.
ಆಗಸ್ಟ್ ಮೊದಲ ಬ್ಯಾಚ್ ಶುರು?
ಆಗಸ್ಟ್ 1ರಿಂದ 7ರ ವರೆಗೆ ಮೊದಲ ಬ್ಯಾಚ್ ನಡೆಯಲಿದೆ. ಅದಾದ ಬಳಿಕ ಆ 10ರಿಂದ 17, ಮೂರನೇ ಬ್ಯಾಚ್ ಆ 20ರಿಂದ 27ರ ವರೆಗೆ ನಡೆಯಲಿದೆ. ಪ್ರತಿ ಬ್ಯಾಚ್‌ಗೆ ಕೇವಲ 20 ಆಸಕ್ತರಿಗೆ ಮಾತ್ರ ಪ್ರವೇಶ. ಕೈಗೆಟುಕುವ ಶುಲ್ಕ ತುಂಬಿದರೆ, ಒಂದೇ ವಾರದಲ್ಲಿ ನಟನೆಯ ಅಂತರಾಳವನ್ನು ತಲುಪಲು ಸಾಧ್ಯ. ಅದೂ ಪರಿಣಿತ ತಂಡದೊಂದಿದೆ.
91 7259479331 ಮತ್ತು+917760185919
veerkathakarat@gmail.com
