• June 2, 2026

ಐದನೇ ಬಾರಿ ಹೊಂಬಾಳೆ ಫಿಲ್ಮ್ಸ್ ಜೊತೆ ಕೈ ಜೋಡಿಸಿದ ಸಂತೋಷ್ ಆನಂದ್ ರಾಮ್

ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಹೊಂಬಾಳೆ ಫಿಲ್ಮ್ಸ್ ಮೂಲಕ ಈಗಾಗ್ಲೆ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಸಂತೋಷ್ ಆನಂದ್ ರಾಮ್ ರ ನಾಲ್ಕನೇ ಸಿನಿಮಾ ಕೂಡ ಇದೇ ಬ್ಯಾನರ್ ನಲ್ಲಿ ಸೆಟ್ಟೇರಿದೆ. ಇದೀಗ ಐದನೇ ಸಿನಿಮಾ ಕೂಡ ಹೊಂಬಾಳೆ ಬ್ಯಾನರ್ ನಲ್ಲೇ ನಿರ್ದೇಶನ ಮಾಡಲಿದ್ದಾರೆ. ಇತ್ತೀಚೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಹುಟ್ಟುಹಬ್ಬದ ಶುಭ ಕೋರಿದ ಹೊಂಬಾಳೆ ಫಿಲ್ಸ್ಮ್ ಮಾಲಿಕ ವಿಜಯ್ ಕಿರಗಂದೂರು ಆನಂದ್ ರಾಮ್ ಗೆ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ. ಸಂತೋಷ್ ಆನಂದ್  ರಾಮ್ ನಿರ್ದೇಶನದ ನಾಲ್ಕನೇ ಸಿನಿಮಾ ಬಿಡುಗಡೆ ಆಗೋ ಮೊದಲೇ ಐದನೇ ಸಿನಿಮಾವನ್ನು ತಮ್ಮ ಬ್ಯಾನರ್ ನಲ್ಲೇ ಆರಂಭಿಸಲು ವಿಜಯ್ ಹೇಳಿದ್ದಾರೆ. ಈ ಮೂಲಕ ಸತತವಾಗಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಐದು ಚಿತ್ರಗಳನ್ನು ಮಾಡಿದ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಸಂತೋಷ್ ಆನಂದ್ ರಾಮ್ ಕಾರಣರಾಗಲಿದ್ದಾರೆ. ಹೊಂಬಾಳೆ ಬ್ಯಾನರ್ ನಲ್ಲಿ ಸಂತೋಷ್ ಆನಂದ್ ರಾಮ್ ಮೊದಲು ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗತ್ತು. ಆ ಬಳಿಕ ಇದೇ ಕಾಂಬಿನೇಷನ್ ನಲ್ಲಿ ಯುವರತ್ನ ಸಿನಿಮಾ ಸೆಟ್ಟೇರಿದ್ದು ಇದು ಕೂಡ ಸೂಪರ್ ಹಿಟ್ ಆಗಿತ್ತು. ಆ ಬಳಿಕ ಜಗ್ಗೇಶ್ ಜೊತೆ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಮಾಡಿದ್ದು ಇನ್ನಷ್ಟೇ ಸಿನಿಮಾ ತೆರೆ ಕಾಣಬೇಕಿದೆ. ಜೊತೆಗೆ ಹೊಂಬಾಳೆ ಬ್ಯಾನರ್ ನಲ್ಲಿ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಗಾಗಿ ಸಂತೋಷ್ ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದು ಇನ್ನೂ ಸೆಟ್ಟೇರಬೇಕು. ಇದಾದ ನಂತರ ಮತ್ತೊಂದು ಸಿನಿಮಾ ಸಂತೋಷ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಶಿವರಾಜ್ ಕುಮಾರ್ ಹೀರೋ ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now