• January 1, 2026

ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ತೆರೆಕಂಡು ಉಳಿದ ಭಾಷೆಗಳಿಗೂ ಡಬ್ ಆಗಿ ಬಿಡುಗಡೆ ಆಗಿರುವ ಕಾಂತಾರಕ್ಕೆ ಚಿತ್ರರಂಗದಲ್ಲಿ ರೆಕಾರ್ಡ್ ಬ್ರೇಕ್ ಮಾಡುತ್ತಿದೆ. ಇದೀಗ ಕಾಂತಾರ ಸಿನಿಮಾ ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಿದೆ. ಸೆಪ್ಟೆಂಬರ್ 30ರಂದು ತೆರೆಗೆ ಬಂದ ಕಾಂತಾರ ಸಿನಿಮಾ ಗಲ್ಲಾ ಪೆಟ್ಟಿಗೆ ದೂಳೆಬ್ಬಿಸುತ್ತಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ರಂಗದಲ್ಲಿ ಕಮಾಲ್ ಮಾಡುತ್ತಿದೆ. ಸದ್ಯ ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ ಬರೋಬ್ಬರಿ ಒಂದು ಕೋಟಿ ಟಿಕೆಟ್​ಗಳು ಮಾರಾಟವಾಗುವ ಮೂಲಕ ಕಾಂತಾರ ಮತ್ತೊಂದು ದಾಖಲೆ ನಿರ್ಮಿಸಿದೆ.   ಕಾಂತಾರ ಸಿನಿಮಾದ ಬಳಿಕ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ರಿಷಬ್ ಶೆಟ್ಟಿಗೆ ಪರಭಾಷೆಯಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈಗಾಗ್ಲೆ ಟಾಲಿವುಡ್ ನಿಂದ ಆಫರ್ ಗಳು ಬರುತ್ತಿದ್ದು ಈ ಮಧ್ಯೆ ಬಿಟೌನ್ ನಿಂದಲೂ ರಿಷಬ್ ಗೆ ಕರೆ ಬರುತ್ತಿದೆ. ಆದರೆ ರಿಷಬ್ ಮಾತ್ರ ಕನ್ನಡದಲ್ಲೇ ಮಾಡುವುದಕ್ಕೆ ತುಂಬಾ ಕೆಲಸವಿದೆ ಎನ್ನುತ್ತಿದ್ದಾರೆ. ಹಿಂದಿಯಲ್ಲಿ ಈವರೆಗೆ 67 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ಎಲ್ಲ ಭಾಷೆಗಳಿಂದ ಸೇರಿ ಚಿತ್ರದ ಗಳಿಕೆ 300 ಕೋಟಿ ರೂಪಾಯಿಗೂ ಅಧಿಕ ಆಗಿದೆ. ಕನ್ನಡ ಸಿನಿಮಾ ಈ ಪರಿ ಸಾಧನೆ ಮಾಡಿರುವುದಕ್ಕೆ ಇಡೀ ಸ್ಯಾಂಡಲ್​ವುಡ್​ ಹೆಮ್ಮೆ ಪಡುತ್ತಿದೆ. ಪ್ರಭಾಸ್​, ಅನುಷ್ಕಾ ಶೆಟ್ಟಿ, ರಜನಿಕಾಂತ್, ವಿವೇಕ್​ ಅಗ್ನಿಹೋತ್ರಿ, ಕಂಗನಾ ರಣಾವತ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now