• June 4, 2026

ಕೊನೆಗೂ ಈಡೇರಿತು ಅಭಿಮಾನಿಗಳ ಆಸೆ: ಅರ್ಜುನ್ ಜನ್ಯ ಚಿತ್ರದಲ್ಲಿ ಶಿವಣ್ಣ, ಉಪ್ಪಿ ನಟನೆ

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹ್ಯಾಟ್ರಿಕ್ ಹೀರೋ ಕಾಂಬಿನೇಷನ್ ನ ಸಿನಿಮಾ ನೋಡ್ಬೇಕು ಅನ್ನೋದು ಸಾಕಷ್ಟು ಅಭಿಮಾನಿಗಳ ಆಸೆ. ಈ ಹಿಂದೆ ಓಂ, ಲವ ಕುಶ ಹಾಗೂ ಪ್ರೀತ್ಸೆ ಸಿನಿಮಾಗಳಲ್ಲಿ ಒಂದಾಗಿದ್ದ ಜೋಡಿಗಳು ಮತ್ತೆ ಯಾವಾಗ ಒಂದಾಗ್ತಾರೆ ಅಂತಿರೋ ಅಭಿಮಾನಿಗಳಿಗೆ ಉಪ್ಪಿ ಹಾಗೂ ಶಿವಣ್ಣನ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ.  ಸಾಕಷ್ಟು ವರ್ಷಗಳ ಬಳಿಕ ಉಪೇಂದ್ರ ಹಾಗೂ ಶಿವಣ್ಣ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ, ಅರ್ಜುನ್ ಜನ್ಯ ಮೊಟ್ಟ ಮೊದಲ ಭಾರಿಗೆ ನಿರ್ದೇಶನದ ಮಾಡುತ್ತಿರುವ ಸಿನಿಮಾದಲ್ಲಿ ಉಪೇಂದ್ರ ಹಾಗೂ ಶಿವರಾಜ್ ಕುಮಾರ್ ಕಾಣಿಸಿಕೊಳ್ತಿದ್ದಾರೆ. ಈಗಾಗ್ಲೆ ಶಿವಣ್ಣ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದು ಇದೀಗ ಉಪೇಂದ್ರ ಎಂಟ್ರಿಕೊಟ್ಟಿದ್ದಾರೆ. ಚಿತ್ರಕ್ಕೆ 45 ಎಂದು ಟೈಟಲ್ ಇಡಲಾಗಿದ್ದು ಇದೇ ಡಿಸೆಂಬರ್ ನಿಂದ ಚಿತ್ರೀಕರಣ ಶುರುವಾಗಲಿದೆ. ಸದ್ಯ ಶಿವಣ್ಣ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಉಪೇಂದ್ರ ಕೈಯಲ್ಲೂ ಆರೇಳು ಸಿನಿಮಾಗಳಿದ್ದು ಈ ಸಿನಿಮಾಗಳು ಕಂಪ್ಲೀಟ್ ಆದ ಬಳಿಕ ಇಬ್ಬರು ಅರ್ಜುನ್ ಜನ್ಯ ಸಿನಿಮಾದಲ್ಲಿ ನಟಿಸಲಿದ್ದಾರೆ. 45 ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಅಭಿಮಾನಿಗಳು ಈಗಿನಿಂದಲೇ ಕಾತರದಿಂದ ಕಾಯುವಂತೆ ಮಾಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now